YouVersion Logo
Search Icon

ಮಾರ್ಕ 2

2
ಯೇಸು ಒಬ್ಬ ರೋಗಿಗೆ ಪಾಪವನ್ನು ಕ್ಷವಿುಸಿದ್ದಕ್ಕೆ ಶಾಸ್ತ್ರಿಗಳು ಆತನ ಮೇಲೆ ಆಕ್ಷೇಪಣೆ ಮಾಡಿದ್ದು
(ಮತ್ತಾ. 9.1-8; ಲೂಕ. 5.17-26)
1ಕೆಲವು ದಿನಗಳಾದ ಮೇಲೆ ಆತನು ಕಪೆರ್ನೌವಿುಗೆ ತಿರಿಗಿ ಬಂದನು. ಮನೆಯಲ್ಲಿದ್ದಾನೆಂಬ ವರ್ತಮಾನವು ಹಬ್ಬಿದಾಗ ಬಹುಜನರು ಕೂಡಿ ಬಂದಿದ್ದರಿಂದ ಬಾಗಿಲಿನ ಬಳಿಯಲ್ಲಾದರೂ ಸ್ಥಳವಿರಲಿಲ್ಲ. 2ಆತನು ಅವರಿಗೆ ದೇವರ ವಾಕ್ಯವನ್ನು ಹೇಳುತ್ತಿದ್ದನು. 3ಅಷ್ಟರಲ್ಲಿ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ಕು ಮಂದಿಯಿಂದ ಹೊರಿಸಿಕೊಂಡು ಆತನ ಬಳಿಗೆ ತಂದರು. 4ಜನರು ಗುಂಪಾಗಿದ್ದದರಿಂದ ಅವರು ಆತನ ಹತ್ತಿರಕ್ಕೆ ಸೇರಲಾರದೆ ಆತನಿದ್ದ ಮನೆಯ ಮೇಲ್ಚಾವಣಿಯನ್ನು ಬಿಚ್ಚಿ ದ್ವಾರಮಾಡಿ ಪಾರ್ಶ್ವವಾಯುರೋಗಿಯು ಮಲಗಿದ್ದ ಹಾಸಿಗೆಯನ್ನು ಇಳಿಸಿದರು. 5ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ - ಮಗನೇ, ನಿನ್ನ ಪಾಪಗಳು ಕ್ಷವಿುಸಲ್ಪಟ್ಟಿವೆ ಎಂದು ಹೇಳಿದನು. 6ಆದರೆ ಶಾಸ್ತ್ರಿಗಳಲ್ಲಿ ಕೆಲವರು ಅಲ್ಲಿ ಕೂತುಕೊಂಡಿದ್ದು - 7ಇವನು ಯಾಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂಷಣೆ. ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷವಿುಸಬಲ್ಲರು? ಎಂದು ತಮ್ಮ ತಮ್ಮ ಮನಸ್ಸಿನಲ್ಲಿ ಅಂದುಕೊಂಡರು. 8ಹೀಗೆ ಅಂದುಕೊಳ್ಳುವದನ್ನು ಕೂಡಲೆ ಯೇಸು ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ - ನೀವು ನಿಮ್ಮ ಮನಸ್ಸಿನಲ್ಲಿ ಯಾಕೆ ಹೀಗೆ ಅಂದುಕೊಳ್ಳುತ್ತೀರಿ? ಯಾವದು ಸುಲಭ? 9ನಿನ್ನ ಪಾಪಗಳು ಕ್ಷವಿುಸಲ್ಪಟ್ಟಿವೆ ಅನ್ನುವದೋ? ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅನ್ನುವದೋ? 10ಆದರೆ ಪಾಪಗಳನ್ನು ಕ್ಷವಿುಸಿಬಿಡುವದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು ಎಂದು ಹೇಳಿ ಪಾರ್ಶ್ವವಾಯುರೋಗಿಯನ್ನು ನೋಡಿ - 11ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗೆಂದು ನಿನಗೆ ಹೇಳುತ್ತೇನೆ ಅಂದನು. 12ಅವನು ಎದ್ದು ಕೂಡಲೆ ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟು ಹೋದನು. ಅದಕ್ಕೆ ಎಲ್ಲರು ಬೆರಗಾಗಿ - ಇದುವರೆಗೆ ನಾವು ಇಂಥದನ್ನು ಎಂದಿಗೂ ನೋಡಿದ್ದೇ ಇಲ್ಲವೆಂದು ಹೇಳುತ್ತಾ ದೇವರನ್ನು ಕೊಂಡಾಡಿದರು.
ಯೇಸು ಭ್ರಷ್ಟರ ಕೂಡ ಊಟಮಾಡಿದ್ದಕ್ಕೆ ಶಾಸ್ತ್ರಿಗಳು ಆತನ ಮೇಲೆ ಆಕ್ಷೇಪಣೆ ಮಾಡಿದ್ದು
(ಮತ್ತಾ. 9.9-13; ಲೂಕ. 5.27-32)
13ಆತನು ಹೊರಟು ತಿರಿಗಿ ಸಮುದ್ರದ ಬಳಿಗೆ ಹೋದನು. ಜನರ ಗುಂಪೆಲ್ಲಾ ಆತನ ಬಳಿಗೆ ಬಂದಾಗ ಆತನು ಅವರಿಗೆ ಉಪದೇಶಮಾಡಿದನು. 14ಆತನು [ಅಲ್ಲಿಂದ] ಹೋಗುತ್ತಿರುವಾಗ ಸುಂಕಕ್ಕೆ ಕೂತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ನೋಡಿ - ನನ್ನನ್ನು ಹಿಂಬಾಲಿಸು ಎಂದು ಅವನನ್ನು ಕರೆಯಲು ಅವನು ಎದ್ದು ಆತನ ಹಿಂದೆ ಹೋದನು. 15ಅನಂತರ ಆತನು ಅವನ ಮನೆಯೊಳಗೆ ಊಟಕ್ಕೆ ಕೂತಿರುವಲ್ಲಿ, ಬಹು ಮಂದಿ ಸುಂಕದವರೂ ಪಾಪಿಗಳೂ ಯೇಸುವಿನ ಮತ್ತು ಆತನ ಶಿಷ್ಯರ ಪಂಙ್ತಿಯಲ್ಲೇ ಕೂತುಕೊಂಡರು. 16ಅಂಥವರು#2.16 ಪಾಠಾಂತರ: ಅಂಥವರು ಬಹುಮಂದಿ ಇದ್ದರು; ಆತನನ್ನು ಹಿಂಬಾಲಿಸಿದರು. ಆತನು ಪಾಪಿಗಳ … ಸಂಗಡ ಊಟಮಾಡುವದನ್ನು ಫರಿಸಾಯರಾದ ಶಾಸ್ತ್ರಿಗಳು ಕಂಡು … . ಬಹು ಮಂದಿ ಇದ್ದರು. ಫರಿಸಾಯರಾದ ಶಾಸ್ತ್ರಿಗಳು ಆತನ ಹಿಂದೆ ಹೋಗಿ ಆತನು ಪಾಪಿಗಳ ಮತ್ತು ಸುಂಕದವರ ಸಂಗಡ ಊಟಮಾಡುವದನ್ನು ಕಂಡು ಆತನ ಶಿಷ್ಯರಿಗೆ - ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ಊಟಮಾಡುತ್ತಾನೆ ನೋಡಿರಿ ಎಂದು ಹೇಳಿದರು. 17ಯೇಸು ಅದನ್ನು ಕೇಳಿ - ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ; ಕ್ಷೇಮವಿಲ್ಲದವರಿಗೆ ಬೇಕು. ನಾನು ನೀತಿವಂತರನ್ನು ಕರೆಯುವದಕ್ಕೆ ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಅಂದನು.
ಯೇಸುವಿನ ಶಿಷ್ಯರು ಉಪವಾಸ ಮಾಡದ್ದಕ್ಕೆ ಶಾಸ್ತ್ರಿಗಳು ಆತನ ಮೇಲೆ ಆಕ್ಷೇಪಣೆ ಮಾಡಿದ್ದು
(ಮತ್ತಾ. 9.14-17; ಲೂಕ. 5.33-38)
18ಇದಲ್ಲದೆ ಯೋಹಾನನ ಶಿಷ್ಯರೂ ಫರಿಸಾಯರೂ ಉಪವಾಸವಾಗಿದ್ದರು. ಅವರು ಆತನ ಬಳಿಗೆ ಬಂದು - ಯೋಹಾನನ ಶಿಷ್ಯರೂ ಫರಿಸಾಯರ ಶಿಷ್ಯರೂ ಉಪವಾಸಮಾಡುತ್ತಾರಲ್ಲ? ನಿನ್ನ ಶಿಷ್ಯರು ಯಾಕೆ ಉಪವಾಸಮಾಡುವದಿಲ್ಲ? ಎಂದು ಕೇಳಲು 19ಯೇಸು ಅವರಿಗೆ - ಮದುವೆಯ ಜನರು ತಮ್ಮ ಸಂಗಡ ಮದಲಿಂಗನು ಇರುವಲ್ಲಿ ಉಪವಾಸಮಾಡುವದುಂಟೇ? ಮದಲಿಂಗನು ತಮ್ಮ ಸಂಗಡ ಇರುವ ತನಕ ಅವರು ಉಪವಾಸಮಾಡಲಾಗದು. 20ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಂಡು ಹೋಗುವ ಕಾಲ ಬರುತ್ತದೆ; ಆ ಕಾಲದಲ್ಲೇ ಉಪವಾಸಮಾಡುವರು. 21ಯಾರೂ ಹೊಸ ಬಟ್ಟೆಯ ತುಂಡನ್ನು ಹಳೆಯ ವಸ್ತ್ರಕ್ಕೆ ತ್ಯಾಪೆಹಚ್ಚುವದಿಲ್ಲ; ಹಚ್ಚಿದರೆ ಆ ಹೊಸ ತ್ಯಾಪೆಯು ಹಳೆಯ ವಸ್ತ್ರವನ್ನು ಹಿಂಜುವದರಿಂದ ಹರಕು ಹೆಚ್ಚಾಗುವದು. 22ಮತ್ತು ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕಿಡುವದಿಲ್ಲ; ಇಟ್ಟರೆ ಆ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ದ್ರಾಕ್ಷಾರಸವು ಬುದ್ದಲಿಗಳು ಎರಡೂ ಕೆಟ್ಟುಹೋಗುವವು. ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ [ಹಾಕಿಡತಕ್ಕದ್ದು] ಎಂದು ಹೇಳಿದನು.
ಯೇಸುವೂ ಆತನ ಶಿಷ್ಯರೂ ಸಬ್ಬತ್‍ದಿನವನ್ನು ಅಲಕ್ಷ್ಯ ಮಾಡುತ್ತಾರೆಂದು ಶಾಸ್ತ್ರಿಗಳು ಆತನ ಮೇಲೆ ಆಕ್ಷೇಪಣೆಮಾಡಿದ್ದು
(ಮತ್ತಾ. 12.1-14; ಲೂಕ. 6.1-11)
23ಯೇಸು ಸಬ್ಬತ್‍ದಿನದಲ್ಲಿ ಪೈರಿನ ಹೊಲಗಳನ್ನು ಹಾದುಹೋಗುತ್ತಿರುವಾಗ, ಆತನ ಶಿಷ್ಯರು ನಡೆಯುತ್ತಾ ತೆನೆಗಳನ್ನು ಮುರುಕೊಂಡರು. 24ಫರಿಸಾಯರು ಆತನನ್ನು - ನೋಡು, ಇವರು ಸಬ್ಬತ್‍ದಿನದಲ್ಲಿ ಮಾಡಬಾರದ ಕೆಲಸವನ್ನು ಯಾಕೆ ಮಾಡುತ್ತಾರೆ ಎಂದು ಕೇಳಿದರು. 25ಆತನು ಅವರಿಗೆ - ದಾವೀದನು ತಾನೂ ತನ್ನ ಸಂಗಡ ಇದ್ದವರೂ ಕೊರತೆಯುಳ್ಳವರಾಗಿ ಹಸಿದಾಗ ಏನು ಮಾಡಿದನೆಂಬದನ್ನು ನೀವು ಎಂದಾದರೂ ಓದಲಿಲ್ಲವೋ? 26ಅವನು ಮಹಾಯಾಜಕನಾದ ಅಬಿಯಾತರನ ಕಾಲದಲ್ಲಿ ದೇವರಮಂದಿರದೊಳಕ್ಕೆ ಹೋಗಿ ಯಾಜಕರು ಹೊರತು ಮತ್ತಾರೂ ತಿನ್ನಬಾರದ ನೈವೇದ್ಯದ ರೊಟ್ಟಿಗಳನ್ನು ತಾನು ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ? ಎಂದು ಹೇಳಿದನು. 27ಮತ್ತು ಆತನು - ಸಬ್ಬತ್‍ದಿನವು ಮನುಷ್ಯರಿಗೋಸ್ಕರ ಉಂಟಾಯಿತೇ ಹೊರತು ಮನುಷ್ಯರು ಸಬ್ಬತ್ ದಿನಕ್ಕೋಸ್ಕರ ಉಂಟಾಗಲಿಲ್ಲ; 28ಹೀಗಿರಲಾಗಿ ಮನುಷ್ಯಕುಮಾರನು ಸಬ್ಬತ್‍ದಿನಕ್ಕೂ ಒಡೆಯನಾಗಿದ್ದಾನೆ ಅಂದನು.

Currently Selected:

ಮಾರ್ಕ 2: KANJV-BSI

Highlight

Share

Copy

None

Want to have your highlights saved across all your devices? Sign up or sign in