ಆದಿಕಾಂಡ 36
36
ಏಸಾವ್ಯರ ಕುಲಾಧಿಪತಿಗಳೂ ಅರಸರೂ
1ಎದೋಮನೆಂಬ ಏಸಾವನ ವಂಶಸ್ಥರು. 2ಏಸಾವನು ಕಾನಾನ್ಯರ ಸ್ತ್ರೀಯರನ್ನು ಮದುವೆಮಾಡಿಕೊಂಡಿದ್ದನು. ಅವರು ಯಾರಾರಂದರೆ - ಹಿತ್ತಿಯನಾದ ಏಲೋನನ ಮಗಳಾಗಿದ್ದ ಆದಾ, ಹಿವ್ವಿಯನಾದ#36.2 ಪಾಠಾಂತರ: ಹೋರಿಯನಾದ. ಸಿಬೆಯೋನನ ಮಗಳಾದ 3ಅನಾಹಳ ಮಗಳಾಗಿದ್ದ ಒಹೊಲೀಬಾಮ; ಮತ್ತು ಇಷ್ಮಾಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿದ್ದ ಬಾಸೆಮತ್ ಇವರೇ.
4ಆದಾ ಎಂಬಾಕೆಯು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಗೂವೇಲನನ್ನು ಹೆತ್ತಳು. 5ಒಹೊಲೀಬಾಮಳು ಯೆಗೂಷನನ್ನೂ ಯಳಾಮನನ್ನೂ ಕೋರಹನನ್ನೂ ಹೆತ್ತಳು. ಕಾನಾನ್‍ದೇಶದಲ್ಲಿ ಏಸಾವನಿಗೆ ಹುಟ್ಟಿದ ಮಕ್ಕಳು ಇವರೇ.
6ಏಸಾವನು ತನ್ನ ಹೆಂಡರನ್ನೂ ಗಂಡು ಹೆಣ್ಣುಮಕ್ಕಳನ್ನೂ ತನ್ನ ಮನೆಗೆ ಸೇರಿದ ಸೇವಕರೆಲ್ಲರನ್ನೂ ತನಗಿದ್ದ ಎಲ್ಲಾ ಪಶುಗಳ ಹಿಂಡುಗಳನ್ನೂ ತಾನು ಕಾನಾನ್ ದೇಶದಲ್ಲಿ ಸಂಪಾದಿಸಿದ್ದ ಆಸ್ತಿಯೆಲ್ಲವನ್ನೂ ತೆಗೆದುಕೊಂಡು ತನ್ನ ತಮ್ಮನಾದ ಯಾಕೋಬನ ಬಳಿಯಿಂದ ಪರದೇಶಕ್ಕೆ ಹೊರಟುಹೋದನು. 7ಅವರ ಸಂಪತ್ತು ಹೆಚ್ಚಿದ್ದರಿಂದ ಅವರಿಬ್ಬರೂ ಒಂದೇ ಸ್ಥಳದಲ್ಲಿರುವದಕ್ಕೆ ಅನುಕೂಲವಿರಲಿಲ್ಲ; ಅವರ ಪಶುಗಳು ಬಹಳವಾಗಿದ್ದದರಿಂದ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆಹೋಯಿತು. 8ಹೀಗಿರಲಾಗಿ ಏಸಾವನು ಸೇಯೀರ್‍ಬೆಟ್ಟದ ಸೀಮೆಗೆ ಹೋಗಿ ಅಲ್ಲೇ ವಾಸವಾಗಿದ್ದನು. ಏಸಾವನಂದರೆ ಎದೋಮನು.
9ಸೇಯೀರ್ ಬೆಟ್ಟದ ಸೀಮೆಯಲ್ಲಿದ್ದ ಎದೋಮ್ಯರ ಮೂಲಪುರುಷನಾದ ಏಸಾವನ ವಂಶಸ್ಥರ ಚರಿತ್ರೆ. 10ಏಸಾವನ ಮಕ್ಕಳ ಹೆಸರುಗಳು ಯಾವವೆಂದರೆ - ಎಲೀಫಜನು ಏಸಾವನ ಹೆಂಡತಿಯಾದ ಆದಾ ಎಂಬಾಕೆಯ ಮಗನು; ರೆಗೂವೇಲನು ಏಸಾವನ ಹೆಂಡತಿಯಾದ ಬಾಸೆಮತಳ ಮಗನು.
11ಎಲೀಫಜನ ಮಕ್ಕಳು ಯಾರಂದರೆ - ತೇಮಾನ್, ಓಮಾರ್, ಚೆಫೋ, ಗತಾಮ್, ಕೆನಜ್, 12ತಿಮ್ನ ಎಂಬವಳು ಏಸಾವನ ಮಗನಾದ ಏಲೀಫಜನಿಗೆ ಉಪಪತ್ನಿಯಾಗಿದ್ದು ಅವನಿಗೆ ಅಮಾಲೇಕನನ್ನು ಹೆತ್ತಳು ಇವರೇ ಏಸಾವನ ಹೆಂಡತಿಯಾದ ಆದಾ ಎಂಬಾಕೆಯ ಸಾಲಿನವರು.
13ರೆಗೂವೇಲನ ಮಕ್ಕಳು ಯಾರಂದರೆ - ನಹತ್, ಜೆರಹ, ಶಮ್ಮಾ, ವಿುಜ್ಜಾ. ಇವರು ಏಸಾವನ ಹೆಂಡತಿಯಾದ ಬಾಸೆಮತಳ ಸಾಲಿನವರು.
14ಏಸಾವನ ಹೆಂಡತಿಯಾಗಿಯೂ ಸಿಬೆಯೋನನ ಮಗಳಾದ ಅನಾಹಳ ಮಗಳಾಗಿಯೂ ಇದ್ದ ಒಹೊಲೀಬಾಮಳ ಮಕ್ಕಳು ಯಾರಂದರೆ - ಯೆಗೂಷ್, ಯಳಾಮ್, ಕೋರಹ ಇವರೇ.
15ಏಸಾವನ ವಂಶಸ್ಥರ ಕುಲಪತಿಗಳು. ಏಸಾವನ ಚೊಚ್ಚಲಮಗನಾದ ಎಲೀಫಜನಿಂದ ಹುಟ್ಟಿದವರು ಯಾರಂದರೆ - ತೇಮಾನ ಕುಲಪತಿ, ಓಮಾರಕುಲಪತಿ, ಚೆಫೋಕುಲಪತಿ, ಕೆನಜ್‍ಕುಲಪತಿ, 16ಕೋರಹಕುಲಪತಿ, ಗತಾಮಕುಲಪತಿ, ಅಮಾಲೇಕಕುಲಪತಿ ಇವರೇ. ಈ ಕುಲಪತಿಗಳು ಎದೋಮ್ಯರ ದೇಶದಲ್ಲಿ ಆದಾ ಎಂಬಾಕೆಯ ಸಂತತಿಯಲ್ಲಿ ಹುಟ್ಟಿದವರು.
17ಏಸಾವನ ಮಗನಾದ ರೆಗೂವೇಲನಿಗೆ ಹುಟ್ಟಿದವರು ಯಾರಾಂದರೆ - ನಹತಕುಲಪತಿ, ಜೆರಹಕುಲಪತಿ, ಶಮ್ಮಾಕುಲಪತಿ, ವಿುಜ್ಜಾಕುಲಪತಿ ಇವರೇ. ಇವರು ಎದೋಮ್ಯರ ದೇಶದಲ್ಲಿ ಏಸಾವನ ಹೆಂಡತಿಯಾದ ಬಾಸೆಮತಳ ಸಂತತಿಯೊಳಗೆ ಹುಟ್ಟಿದವರು.
18ಏಸಾವನ ಹೆಂಡತಿಯಾದ ಒಹೊಲೀಬಾಮಳ ಸಂತಾನದವರು ಯಾರಂದರೆ - ಯೆಗೂಷ್‍ಕುಲಪತಿ, ಯಳಾಮಕುಲಪತಿ, ಕೋರಹಕುಲಪತಿ ಇವರೇ. ಇವರು ಅನಾಹಳ ಮಗಳಾಗಿಯೂ ಏಸಾವನ ಹೆಂಡತಿಯಾಗಿಯೂ ಇದ್ದ ಒಹೊಲೀಬಾಮಳ ಸಂತಾನದವರು.
19ಎದೋಮನೆನಿಸಿಕೊಳ್ಳುವ ಏಸಾವನಿಂದ ಹುಟ್ಟಿದ ಕುಲಗಳಿಗೆ ಇವರೇ ಕುಲಪತಿಗಳು.
20ಆ ಸೀಮೆಯ ಮೂಲನಿವಾಸಿಗಳು ಹೋರಿಯನಾದ ಸೇಯೀರನಿಂದ ಹುಟ್ಟಿದವರು; ಅವರು ಯಾರಂದರೆ - ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, ದೀಶೋನ್, ಏಚೆರ್, ದೀಶಾನ್ ಇವರೇ. 21ಇವರು ಎದೋಮ್ಯರ ದೇಶದಲ್ಲಿ ಸೇಯೀರನ ಸಂತತಿಯವರಾದ ಹೋರಿಯರಲ್ಲಿ ಹುಟ್ಟಿದ ಕುಲಪತಿಗಳು.
22ಲೋಟಾನನ ಮಕ್ಕಳು - ಹೋರಿ, ಹೇಮಾಮ್; ಲೋಟಾನನ ತಂಗಿಯು ತಿಮ್ನಾ.
23ಶೋಬಾಲನ ಮಕ್ಕಳು - ಅಲ್ವಾನ್, ಮಾನಹತ್, ಗೇಬಾಲ್, ಶೆಫೋ, ಓನಾಮ್.
24ಸಿಬೆಯೋನನ ಮಕ್ಕಳು - ಅಯ್ಯಾ, ಅನಾಹ. ಈ ಅನಾಹನೇ ತನ್ನ ತಂದೆಯಾದ ಸಿಬೆಯೋನನ ಕತ್ತೆಗಳನ್ನು ಮೇಯಿಸುತ್ತಿದ್ದಾಗ ಕಾಡಿನಲ್ಲಿ ಬಿಸಿನೀರಿನ ಒರತೆಗಳನ್ನು ಕಂಡುಕೊಂಡವನು.
25ಅನಾಹನ ಮಕ್ಕಳು - ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮ.
26ದೀಶೋನನ ಮಕ್ಕಳು - ಹೆಮ್ದಾನ್, ಎಷ್ಬಾನ್, ಇತ್ರಾನ್, ಕೆರಾನ್.
27ಏಚೆರನ ಮಕ್ಕಳು - ಬಿಲ್ಹಾನ್, ಜಾವಾನ್ ಅಕಾನ್.
28ದೀಶಾನನ ಮಕ್ಕಳು - ಊಚ್, ಅರಾನ್.
29ಹೋರಿಯರಿಂದ ಹುಟ್ಟಿದ ಕುಲಪತಿಗಳು - ಲೋಟಾನ್‍ಕುಲಪತಿ, ಶೋಬಾಲಕುಲಪತಿ, ಸಿಬೆಯೋನ್‍ಕುಲಪತಿ, 30ಅನಾಹಕುಲಪತಿ, ದೀಶೋನ್‍ಕುಲಪತಿ, ಏಚೆರ್‍ಕುಲಪತಿ, ದೀಶಾನ್‍ಕುಲಪತಿ ಇವರೇ. ಇವರು ಹೋರಿಯರಿಂದ ಹುಟ್ಟಿದವರಾಗಿ ಸೇಯೀರ್ ಸೀಮೆಯಲ್ಲಿ ಆಧಿಪತ್ಯನಡಿಸಿದ ಕುಲಪತಿಗಳು.
31ಇಸ್ರಾಯೇಲ್ಯರ ಅರಸರು ಆಳುವದಕ್ಕಿಂತ ಮುಂಚೆ ಎದೋಮ್ಯರ ದೇಶದಲ್ಲಿ ಆಳುತ್ತಿದ್ದ ಅರಸರ ಚರಿತ್ರೆ ಹೇಗಂದರೆ - 32ಬೆಯೋರನ ಮಗನಾದ ಬೆಲಗನು ಎದೋಮ್ಯರಲ್ಲಿ ಆಳಿದನು; ಅವನ ರಾಜಧಾನಿಯ ಹೆಸರು ದಿನ್ಹಾಬಾ. 33ಬೆಲಗನು ಸತ್ತ ಮೇಲೆ ಬೊಚ್ರದವನಾದ ಜೆರಹನ ಮಗನಾಗಿದ್ದ ಯೋಬಾಬನು ಆಧಿಪತ್ಯಕ್ಕೆ ಬಂದನು. 34ಯೋಬಾಬನು ಸತ್ತ ಮೇಲೆ ತೇಮಾನೀಯರ ದೇಶದವನಾದ ಹುಷಾಮನು ಅವನಿಗೆ ಬದಲಾಗಿ ಆಳಿದನು. 35ಹುಷಾಮನು ಸತ್ತ ಮೇಲೆ ಮೊವಾಬ್ಯರ ಬೈಲಿನಲ್ಲಿ ವಿುದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು; ಅವನ ರಾಜಧಾನಿಯ ಹೆಸರು ಅವೀತ್. 36ಹದದನು ಸತ್ತ ಮೇಲೆ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು. 37ಸಮ್ಲಾಹನು ಸತ್ತ ಮೇಲೆ ನದೀತೀರದಲ್ಲಿರುವ ರೆಹೋಬೋತೂರಿನ ಸೌಲನು ಅರಸನಾದನು. 38ಸೌಲನು ಸತ್ತ ಮೇಲೆ ಅಕ್ಬೋರನ ಮಗನಾದ ಬಾಳ್ಹಾನಾನನು ಅರಸನಾದನು. 39ಅಕ್ಬೋರನ ಮಗನಾದ ಬಾಳ್ಹಾನಾನನು ಸತ್ತ ಮೇಲೆ ಹದರನು ಅರಸನಾದನು; ಅವನ ರಾಜಧಾನಿಯ ಹೆಸರು ಪಾಗು; ಅವನ ಹೆಂಡತಿಯ ಹೆಸರು ಮಹೇಟಬೇಲ್; ಆಕೆ ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.
40ಸ್ಥಳಕುಲನಾಮಗಳ ಪ್ರಕಾರ ಏಸಾವನಿಂದ ಹುಟ್ಟಿದ ಕುಲಪತಿಗಳ ಹೆಸರುಗಳು ಯಾವವಂದರೆ - ತಿಮ್ನಕುಲಪತಿ, ಅಲ್ವಾಕುಲಪತಿ, ಯೆತೇತಕುಲಪತಿ, 41ಒಹೊಲೀಬಾಮಾಕುಲಪತಿ, ಏಲಾಕುಲಪತಿ, 42ಪೀನೋನ್‍ಕುಲಪತಿ, ಕೆನೆಜ್‍ಕುಲಪತಿ, 43ತೇಮಾನ್‍ಕುಲಪತಿ, ವಿುಪ್ಚಾರಕುಲಪತಿ, ಮಗ್ದೀಯೇಲ್‍ಕುಲಪತಿ, ಗೀರಾಮ್‍ಕುಲಪತಿ ಇವೇ. ಇವರು ತಮ್ಮ ದೇಶದೊಳಗಣ ನಿವಾಸಸ್ಥಳಗಳ ಪ್ರಕಾರ ಎದೋಮ್ಯರ ಕುಲಪತಿಗಳು.
ಮೇಲೆ ಹೇಳಿರುವದು ಎದೋಮ್ಯರ ಮೂಲ ಪುರುಷನಾದ ಏಸಾವನ ವಂಶಸ್ಥರ ಚರಿತ್ರೆ.
Currently Selected:
ಆದಿಕಾಂಡ 36: KANJV-BSI
Highlight
Share
Copy
![None](/_next/image?url=https%3A%2F%2Fimageproxy.youversionapi.com%2F58%2Fhttps%3A%2F%2Fweb-assets.youversion.com%2Fapp-icons%2Fen.png&w=128&q=75)
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.