ಅಪೊಸ್ತಲರ ಕೃತ್ಯಗಳು 5:3-5
ಅಪೊಸ್ತಲರ ಕೃತ್ಯಗಳು 5:3-5 KANJV-BSI
ಆಗ ಪೇತ್ರನು - ಅನನೀಯಾ, ಸೈತಾನನು ನಿನ್ನ ಹೃದಯದಲ್ಲಿ ತುಂಬಿಕೊಂಡದ್ದೇನು? ನೀನು ಯಾಕೆ ಆ ಹೊಲದ ಕ್ರಯದಲ್ಲಿ ಕೆಲವನ್ನು ಬಚ್ಚಿಟ್ಟುಕೊಂಡು ಪವಿತ್ರಾತ್ಮನನ್ನು ವಂಚಿಸಬೇಕೆಂದಿದ್ದೀ? ಆ ಆಸ್ತಿ ಇದ್ದಾಗ ನಿನ್ನದಾಗಿಯೇ ಇತ್ತಲ್ಲವೇ. ಮಾರಿದ ಮೇಲೆಯೂ ಬಂದ ಹಣವು ನಿನ್ನ ಅಧೀನದಲ್ಲೇ ಇತ್ತಲ್ಲವೇ. ನೀನು ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಯಾಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ ಆಡಿದಿ ಅಂದನು. ಈ ಮಾತುಗಳನ್ನು ಅನನೀಯನು ಕೇಳಿದ ಕೂಡಲೆ ಬಿದ್ದು ಪ್ರಾಣಬಿಟ್ಟನು; ಕೇಳಿದವರೆಲ್ಲರಿಗೂ ಮಹಾ ಭಯ ಹಿಡಿಯಿತು.