ಆಗ ಯೇಸು, “ವಿಶ್ವಾಸವಿಲ್ಲದ ಮೂರ್ಖ ಸಂತತಿಯೇ, ಇನ್ನೂ ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,” ಎಂದು ಹೇಳಿದರು. ಆಗ ಯೇಸು ದೆವ್ವವನ್ನು ಗದರಿಸಲಾಗಿ ಅದು ಹುಡುಗನೊಳಗಿಂದ ಹೊರಟುಹೋಯಿತು. ಆಗ ಆ ಹುಡುಗನು ಅದೇ ಗಳಿಗೆಯಲ್ಲಿಯೇ ಗುಣಮುಖನಾದನು.