ಯೆಹೋವನು ಅಡವಿಯಲ್ಲಿರುವ ನಿನ್ನ ಎಲ್ಲಾ ಪಶುಗಳಿಗೂ, ಕುದುರೆ, ಕತ್ತೆ, ಒಂಟೆ, ದನ, ಕುರಿ, ಆಡು ಇವೆಲ್ಲವುಗಳಿಗೂ ವಿರೋಧವಾಗಿ ತನ್ನ ಕೈಯನ್ನು ಎತ್ತಿ ಘೋರವ್ಯಾಧಿಯನ್ನು ಉಂಟುಮಾಡುವನೆಂದು ತಿಳಿದುಕೋ. ಯೆಹೋವನು ಇಸ್ರಾಯೇಲರ ಪಶುಗಳಿಗೂ, ಐಗುಪ್ತರ ಪಶುಗಳಿಗೂ ವ್ಯತ್ಯಾಸವನ್ನುಂಟು ಮಾಡುವನು. ಇಸ್ರಾಯೇಲರಿಗಿರುವ ಪಶುಗಳಲ್ಲಿ ಒಂದೂ ಸಾಯುವುದಿಲ್ಲ’ ಎಂದು ಹೇಳಬೇಕು” ಎಂದನು.