ಸ್ವಲ್ಪ ಕಾಲದನಂತರ, ಯೋಸೇಫನ ಒಡೆಯನ ಹೆಂಡತಿಯು ಯೋಸೇಫನ ಮೇಲೆ ಆಸೆಪಟ್ಟಳು. ಒಂದು ದಿನ ಆಕೆ ಅವನಿಗೆ, “ನನ್ನೊಂದಿಗೆ ಮಲಗಿಕೊ” ಎಂದು ಹೇಳಿದಳು.
ಆದರೆ ಯೋಸೇಫನು ತಿರಸ್ಕರಿಸಿದನು. ಅವನು, “ನನ್ನ ಧಣಿಯು ಈ ಮನೆಯ ಜವಾಬ್ದಾರಿಕೆಗಳನ್ನೆಲ್ಲಾ ನನಗೆ ವಹಿಸಿ ನಿಶ್ಚಿಂತೆಯಿಂದಿದ್ದಾನೆ. ನನ್ನ ಧಣಿಯು ಈ ಮನೆಯ ಸರ್ವಾಧಿಕಾರವನ್ನು ನನಗೆ ಕೊಟ್ಟಿದ್ದರೂ ತನ್ನ ಧರ್ಮಪತ್ನಿಯಾದ ನಿನ್ನನ್ನು ನನಗೆ ಅಧೀನಪಡಿಸಿಲ್ಲ. ಹೀಗಿರಲು ಇಂಥಾ ಮಹಾ ದುಷ್ಕೃತ್ಯವನ್ನು ನಡೆಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಉತ್ತರಕೊಟ್ಟನು.