Logo de YouVersion
Icono de búsqueda

ಆದಿ 10

10
ನೋಹನ ಮಕ್ಕಳ ಸಂತಾನ
1ಪೂರ್ವ 1:5-23
1ನೋಹನ ಮಕ್ಕಳಾದ ಶೇಮ್, ಹಾಮ್, ಯೆಫೆತ್ ಎಂಬುವವರ ಸಂತಾನದವರ ಚರಿತ್ರೆ: ಜಲಪ್ರಳಯದ ನಂತರ ಅವರಿಗೆ ಮಕ್ಕಳು ಹುಟ್ಟಿದರು.
2ಯೆಫೆತನ ಸಂತಾನದವರು ಯಾರೆಂದರೆ - ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್, ತೀರಾಸ್ ಎಂಬವರು.
3ಗೋಮೆರನ ಸಂತಾನದವರು - ಅಷ್ಕೆನಸ್, ರೀಫತ್, ತೋಗರ್ಮ ಎಂಬವರು.
4ಯಾವಾನನ ಸಂತಾನದವರು - ಎಲೀಷಾ, ತಾರ್ಷೀಷ್, ಕಿತ್ತೀಮ್, ದೋದಾ ಎಂಬ ಸ್ಥಳದವರು. ಇವರು ಸಮುದ್ರದ ರೇವು ಪ್ರದೇಶಗಳಲ್ಲಿ ಹರಡಿಕೊಂಡರು. 5ದೇಶ, ಭಾಷೆ, ಕುಲ, ಜನಾಂಗಗಳ ಪ್ರಕಾರ ಇವರೇ ಯೆಫೆತನ ವಂಶದವರು.
6ಹಾಮನ ಸಂತಾನದವರು ಯಾರೆಂದರೆ - ಕೂಷ್, ಮಿಚ್ರಯಿಮ್, ಪೂತ್, ಕಾನಾನ್ ಎಂಬುವವರು.
7ಕೂಷನ ಸಂತಾನದವರು ಯಾರೆಂದರೆ - ಸೆಬಾ, ಹವೀಲ, ಸಬ್ತಾ, ರಗ್ಮ, ಸಬ್ತಕಾ ಎಂಬವರು. ರಗ್ಮ ಸಂತಾನದವರು - ಶೆಬಾ, ದೆದಾನ್ ಎಂಬುವವರು.
8ಕೂಷನು ನಿಮ್ರೋದನನ್ನು ಪಡೆದನು. ಅವನು ಭೂಮಿಯ ಮೇಲಿನ ಮೊದಲನೆಯ ಪರಾಕ್ರಮಶಾಲಿಯಾಗಿದ್ದನು. 9ಯೆಹೋವನ ದೃಷ್ಟಿಯಲ್ಲಿ ನಿಮ್ರೋದನು ದಿಟ್ಟ ಬೇಟೆಗಾರನಾಗಿದ್ದನು. ಆದುದರಿಂದ “ಯೆಹೋವನು ನಿನ್ನನ್ನು ದಿಟ್ಟ ಬೇಟೆಗಾರನಾಗಿಸಲಿ” ಎಂಬ ಗಾದೆ ಇಂದಿನವರೆಗೂ ಹೇಳುವುದುಂಟು. 10ಶಿನಾರ್ ದೇಶದಲ್ಲಿರುವ #10:10 ಬಾಬಿಲೋನ್ಬಾಬೆಲ್, ಯೆರೆಕ್, ಅಕ್ಕದ್, ಕಲ್ನೇ ಎಂಬ ಪಟ್ಟಣಗಳೇ ಅವನ ರಾಜ್ಯದ ಮೂಲ ಪಟ್ಟಣಗಳು. 11ಅವನು ಆ ದೇಶದಿಂದ ಹೊರಟು ಅಶ್ಶೂರ್ ದೇಶಕ್ಕೆ ಬಂದು ನಿನೆವೆ, ರೆಹೋಬೋತೀರ್, ಕೆಲಹ ಎಂಬ ಪಟ್ಟಣಗಳನ್ನೂ, 12ನಿನೆವೆಗೂ ಕೆಲಹಕ್ಕೂ ಮಧ್ಯದಲ್ಲಿ ಇರುವ ರೆಸೆನ್ ಪಟ್ಟಣವನ್ನೂ ಕಟ್ಟಿಸಿದನು. ರೆಸೆನ್ ಮಹಾಪಟ್ಟಣವೆಂದು ಪ್ರಸಿದ್ಧವಾಗಿದೆ.
13ಮಿಚ್ರಯಿಮ್ಯರಿಂದ ಲೂದ್ಯರು, ಅನಾಮ್ಯರು, ಲೆಹಾಬ್ಯರು, ನಫ್ತುಹ್ಯರು, ಹುಟ್ಟಿದರು. 14ಪತ್ರುಸ್ಯರು, ಕಸ್ಲುಹ್ಯರು, ಕಫ್ತೋರ್ಯರು ಫಿಲಿಷ್ಟಿಯರಿಂದ ಹುಟ್ಟಿದರು.
15ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಆ ಮೇಲೆ ಹೇತ್ ಹುಟ್ಟಿದನು. 16ಇದಲ್ಲದೆ ಯೆಬೂಸಿಯರು, ಅಮೋರಿಯರು, ಗಿರ್ಗಾಷಿಯರು, 17ಹಿವ್ವಿಯರು, ಅರ್ಕಿಯರು, ಸೀನಿಯರು ಕಾನಾನನಿಂದ ಹುಟ್ಟಿದರು. 18ಕಾಲ ಕ್ರಮೇಣವಾಗಿ ಈ ಕಾನಾನ್ಯರ ವಂಶಸ್ಥರಾದ ಸೀನಿಯರು, ಅರ್ವಾದಿಯರು, ಚೆಮಾರಿಯರು, ಹದೋರಾಮರು, ಹಮಾತಿಯರು ಹರಡಿ ಕಾನಾನನಿಂದ ಹುಟ್ಟಿದರು.
19ಕಾನಾನ್ಯರ ಸೀಮೆಯು ಸೀದೋನ್ ಪಟ್ಟಣದಿಂದ ಗೆರಾರಿಗೆ ಹೋಗುವ ದಾರಿಯಲ್ಲಿರುವ ಗಾಜಾ ಪಟ್ಟಣದ ವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಿಗೆ ಹೋಗುವ ದಾರಿಯಲ್ಲಿರುವ ಲೆಷಾ ಊರಿನವರೆಗೂ ಇರುತ್ತದೆ.
20ಕುಲ, ಭಾಷೆ, ದೇಶ, ಜನಾಂಗಗಳ ಪ್ರಕಾರ ಇವರೇ ಹಾಮನ ವಂಶದವರು.
21ಇಬ್ರಿಯರೆಲ್ಲರಿಗೆ ಮೂಲಪುರುಷನನೂ, ಯೆಫೆತನ ಅಣ್ಣನೂ ಆಗಿದ್ದ ಶೇಮನಿಗೂ ಮಕ್ಕಳು ಹುಟ್ಟಿದರು.
22ಶೇಮನ ಮಕ್ಕಳು - ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್ ಎಂಬವರು.
23ಅರಾಮ್ ಸಂತಾನದವರು - ಊಸ್, ಹೂಲ್, ಗೆತೆರ್, ಮಷ್ ಎಂಬವರು.
24ಅರ್ಪಕ್ಷದನಿಂದ ಶೆಲಹನೂ, ಶೆಲಹನಿಂದ ಎಬರನೂ ಹುಟ್ಟಿದನು.
25ಎಬರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗೆಂಬ ಹೆಸರು; ಅವನ ಕಾಲದಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತ್ತು. ಅವನ ತಮ್ಮನ ಹೆಸರು ಯೊಕ್ತಾನ್.
26ಯೊಕ್ತಾನನ ಸಂತಾನದವರು - ಅಲ್ಮೋದಾದ್, ಶೆಲೆಪ್, ಹಚರ್ಮಾವೆತ್, ಯೆರಹ, 27ಹದೋರಾಮ್, ಊಜಾಲ್, ದಿಕ್ಲಾ, 28ಓಬಾಲ್, ಅಬೀಮಯೇಲ್, ಶೆಬಾ, ಓಫೀರ್, ಹವೀಲ, ಯೋಬಾಬ್ ಎಂಬವರು. 29ಹದೋರಾಮ್, ಊಜಾಲ್, ದಿಕ್ಲಾ, ಓಬಾಲ್, ಅಬೀಮಯೇಲ್, ಶೆಬಾ, ಓಫೀರ್, ಹವೀಲ, ಯೋಬಾಬ್ ಈ ಕುಲಗಳೆಲ್ಲಾ ಯೊಕ್ತಾನನಿಂದ ಹುಟ್ಟಿದವು.
30ಇವರ ನಿವಾಸವು ಮೇಶಾ ಸೀಮೆ ಮೊದಲುಗೊಂಡು ಪೂರ್ವ ದಿಕ್ಕಿನಲ್ಲಿರುವ ಸೆಫಾರ್ ಎಂಬ ಬೆಟ್ಟದ ವರೆಗೂ ಇತ್ತು.
31ಕುಲ, ಭಾಷೆ, ಜನಾಂಗಗಳ ಪ್ರಕಾರ ಇವರೇ ಶೇಮನ ವಂಶದವರು.
32ಜನಾಂಗಗಳ ಸಂತತಿಯ ಪ್ರಕಾರ ಇವರೇ ನೋಹನ ವಂಶದವರು. ಜಲಪ್ರಳಯವಾದ ನಂತರ ಭೂಮಿಯ ಮೇಲೆ ಹರಡಿಕೊಂಡ ಜನಾಂಗಗಳು ಇವರೇ.

Actualmente seleccionado:

ಆದಿ 10: IRVKan

Destacar

Compartir

Copiar

None

¿Quieres tener guardados todos tus destacados en todos tus dispositivos? Regístrate o inicia sesión