ಮತ್ತಾಯ 6:16-18
ಮತ್ತಾಯ 6:16-18 KSB
“ನೀವು ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪಗೆ ಮಾಡಿಕೊಳ್ಳಬೇಡಿರಿ, ತಾವು ಉಪವಾಸ ಮಾಡುತ್ತಿದ್ದೇವೆಂದು ಜನರಿಗೆ ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ತಮ್ಮ ಮುಖವನ್ನು ಬಾಡಿಸಿಕೊಂಡಿರುತ್ತಾರೆ. ಅವರು ತಮಗೆ ಬರತಕ್ಕ ಪ್ರತಿಫಲವನ್ನು ಪೂರ್ತಿಯಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ನೀನು ಉಪವಾಸ ಮಾಡುವಾಗ, ತಲೆಗೆ ಎಣ್ಣೆ ಹಚ್ಚಿಕೊಂಡು, ಮುಖ ತೊಳೆದುಕೋ. ಹೀಗೆ ಮಾಡಿದರೆ, ಕಾಣದಿರುವ ನಿನ್ನ ತಂದೆಯ ಹೊರತು ಬೇರೆ ಯಾರಿಗೂ ನೀನು ಉಪವಾಸದಿಂದಿರುವುದು ತಿಳಿಯುವುದಿಲ್ಲ ಮತ್ತು ಗುಟ್ಟಾಗಿ ಮಾಡುವುದನ್ನು ಕಾಣುವ ನಿನ್ನ ತಂದೆ, ನಿನಗೆ ಪ್ರತಿಫಲ ಕೊಡುವರು.