ನ್ಯಾಯ 5
5
ದೆಬೋರಳ ಜಯಗೀತೆ
1ಆ ದಿನದಲ್ಲಿ ದೆಬೋರಳೂ ಅಬೀನೋವಮನ ಮಗನಾದ ಬಾರಾಕನೂ ಈ ಗೀತೆಯನ್ನು ಹಾಡಿದರು:
2“#5:2 ಅಥವಾ ಯೆಹೋವನು ಇಸ್ರಾಯೇಲರಿಗಾಗಿ ನೀತಿಯನ್ನು ಸ್ಥಾಪಿಸಿದ್ದಾನೆ.ಇಸ್ರಾಯೇಲರಲ್ಲಿ ಸೇನಾ ನಾಯಕರು ಎದ್ದಿದ್ದಾರೆ;
ಜನರು ಸ್ವಇಚ್ಛೆಯಿಂದ ಸೈನ್ಯದಲ್ಲಿ ಸೇರಿದ್ದಾರೆ,
ಯೆಹೋವನನ್ನು ಕೊಂಡಾಡಿರಿ.
3“ಅರಸರೇ, ಕೇಳಿರಿ! ಪ್ರಭುಗಳೇ, ಕಿವಿಗೊಡಿರಿ!
ನಾನು ಯೆಹೋವನನ್ನು ಕೀರ್ತಿಸುವೆನು;
ನಾನು ಇಸ್ರಾಯೇಲ್ ದೇವರಾದ ಯೆಹೋವನಿಗೆ ಸ್ತುತಿ ಗೀತೆ ಹಾಡುವೆನು.
4“ಯೆಹೋವನೇ, ನೀನು ಹೊರಟು
ಎದೋಮ್ಯರ ಪ್ರಾಂತ್ಯವಾದ ಸೇಯೀರಿನ ಮಾರ್ಗವಾಗಿ ಪಯಣಮಾಡುತ್ತಾ ಬರುವಾಗ
# 5:4 2 ಸಮು 22:8; ನಹೂ. 1:5. ಭೂಲೋಕವು ಕಂಪಿಸಿತು, ಆಕಾಶವು ನಡುಗಿತು;
ಮೇಘಮಂಡಲವು ಮಳೆಗರೆಯಿತು.
5ಯೆಹೋವನ ಮುಂದೆ ಪರ್ವತಗಳು ಕರಗಿಹೋದವು,
# 5:5 ಯೆಶಾ 64: 1 ಇಸ್ರಾಯೇಲಿನ ದೇವರಾದ ಯೆಹೋವನ ಎದುರಿಗೆ ಆ ಸೀನಾಯಿಬೆಟ್ಟವೂ ನೀರಾಯಿತು.
6“ಅನಾತನ ಮಗನಾದ ಶಮ್ಗರನ ಕಾಲದಲ್ಲಿಯೂ,
ಯಾಯೇಲಳ ದಿನಗಳಲ್ಲಿಯೂ ರಾಜಮಾರ್ಗಗಳಲ್ಲಿ ಸಂಚಾರವು ನಿಂತುಹೋಯಿತು.
ಪ್ರಯಾಣಿಕರು ಅಂಕುಡೊಂಕಾದ ದಾರಿಹಿಡಿದು ಹೋದರು.
7ದೆಬೋರಳಾದ ನಾನು ಇಸ್ರಾಯೇಲರಲ್ಲಿ ತಾಯಿಯಂತೆ ಎದ್ದುಬರುವವರೆಗೆ
ಇಸ್ರಾಯೇಲ್ ಗ್ರಾಮಗಳು ಹಾಳುಬಿದ್ದಿದ್ದವು.
8ಜನರು ಅನ್ಯದೇವತೆಗಳನ್ನು ಆರಿಸಿಕೊಂಡಿದ್ದರು;
ಯುದ್ಧವು ಉರುಬಾಗಿಲವರೆಗೂ ಬಂದಿತ್ತು.
ಇಸ್ರಾಯೇಲರ ನಲ್ವತ್ತು ಸಾವಿರ ಸೈನಿಕರ ಮಧ್ಯದಲ್ಲಿ ಗುರಾಣಿ ಬರ್ಜಿಗಳು ಇರಲೇ ಇಲ್ಲ.
9ನನ್ನ ಹೃದಯವು ಇಸ್ರಾಯೇಲರ ಸೇನಾಧಿಪತಿಗಳಲ್ಲಿಯೂ,
ಸ್ವಇಚ್ಛೆಯಿಂದ ಸೈನ್ಯದಲ್ಲಿ ಸೇರಿದ ಜನರಲ್ಲಿಯೂ ಸಂತೋಷಿಸುತ್ತದೆ;
ಅವರಿಗೋಸ್ಕರ ಯೆಹೋವನನ್ನು ಕೊಂಡಾಡುತ್ತೇವೆ.
10“ಬಿಳೀ ಕತ್ತೆಗಳ ಮೇಲೆ ಸವಾರಿಮಾಡುವವರೇ,
ರತ್ನಗಂಬಳಿಗಳ ಮೇಲೆ ಕುಳಿತುಕೊಳ್ಳುವವರೇ, ಕಾಲ್ನಡಿಗೆಯಲ್ಲಿ ಪ್ರಯಾಣಿಸುವವರೇ, ಗಾನಮಾಡಿರಿ.
11ಸೇದುವ ಬಾವಿಗಳ ಬಳಿಯಲ್ಲಿ #5:11 ಸಂಗೀತಗಾರರ.ಬಿಲ್ಲುಗಾರರ ಧ್ವನಿಗಿಂತ ಗಟ್ಟಿಯಾಗಿ
ಯೆಹೋವನ ನೀತಿಸಾಧನೆಯ ವರ್ಣನೆಯನ್ನು ಕೇಳಿರಿ.
ಆತನು ತನ್ನ ಪ್ರಜೆಗಳಾಗಿರುವ ಇಸ್ರಾಯೇಲ್ ಗ್ರಾಮಸ್ಥರ ನ್ಯಾಯವನ್ನು ಸ್ಥಾಪಿಸಿದ್ದಾನಲ್ಲಾ.
ಆ ಕಾಲದಲ್ಲಿ ಯೆಹೋವನ ಜನರು ಊರುಬಾಗಿಲುಗಳಿಗೆ ಇಳಿದು ಬಂದರು.
12‘ಎಚ್ಚರವಾಗು, ದೆಬೋರಳೇ! ಎಚ್ಚರವಾಗು,
ಎಚ್ಚರವಾಗು, ಎಚ್ಚರವಾಗಿ ಗಾನಮಾಡು.
ಬಾರಾಕನೇ, ಏಳು;
ಅಬೀನೋವಮನ ಮಗನೇ, ನೀನು ಸೆರೆಹಿಡಿದವರನ್ನು ಸಾಗಿಸಿಕೊಂಡು ಹೋಗು.’
13“ಆಗ ಚದರಿಹೋದವರು ನಾಯಕರ ಬಳಿಗೆ ಕೂಡಿಬಂದರು.
ಯೆಹೋವನ ಜನರು ವೀರರಾಗಿ ನನ್ನ ಸಹಾಯಕ್ಕೆ ನೆರೆದು ಬಂದರು.
14ಅಮಾಲೇಕ್ಯರ ಪ್ರದೇಶದಲ್ಲಿ ನೆಲೆಗೊಂಡಿರುವ ಎಫ್ರಾಯೀಮ್ಯರೂ
ಅವರ ಜೊತೆಯಲ್ಲಿ ಬೆನ್ಯಾಮೀನ್ಯರೂ ಬಂದರು.
ಮಾಕೀರನ ಗೋತ್ರದಿಂದ ಪ್ರಧಾನರೂ
ಜೆಬುಲೂನ್ ಕುಲದಿಂದ ದಂಡಧಾರಿಗಳಾದ ಸೇನಾನಾಯಕರೂ
15ದೆಬೋರಳ ಜೊತೆಯಲ್ಲಿ ಇಸ್ಸಾಕಾರ್ ಕುಲಪ್ರಭುಗಳೂ
ಇಸ್ಸಾಕಾರರೊಡನೆ ಬಾರಾಕನೂ ಆಗಮಿಸಿದರು.
ಇವರೆಲ್ಲರೂ ಬಾರಾಕನ ಹೆಜ್ಜೆಹಿಡಿದು ತಟ್ಟನೆ ತಗ್ಗಿನ ಪ್ರದೇಶಕ್ಕೆ ಬಂದರು.
ರೂಬೇನ್ಯರ ಗೋತ್ರದವರು ಬಹಳಷ್ಟು ತಮ್ಮ ಹೃದಯಗಳಲ್ಲಿ ವಿಶ್ಲೇಷಿಸಿದರೂ ತೀರ್ಮಾನಿಸಲಾಗಲ್ಲಿಲ್ಲ
16ರೂಬೇನ್ಯರೇ, ನೀವು ಕುರಿಹಟ್ಟಿಗಳಲ್ಲಿ,
ಮಂದೆಗಳ ಮಧ್ಯದಲ್ಲಿ ಕೊಳಲೂದುವುದನ್ನು ಕೇಳಬೇಕೆಂದು ಅಲ್ಲಿಯೇ ಕುಳಿತಿರುವುದೇಕೆ?
ರೂಬೇನ್ಯರು ಗೋತ್ರದವರು ಬಹಳಷ್ಟು ತಮ್ಮ ಹೃದಯಗಳಲ್ಲಿ ವಿಶ್ಲೇಷಿಸಿದರೂ ತೀರ್ಮಾನಿಸಲಾಗಲ್ಲಿಲ್ಲ.
17ಗಿಲ್ಯಾದ್ಯರು ಯೊರ್ದನಿನ ಆಚೆಯಲ್ಲೇ ಉಳಿದರು.
ದಾನ್ ಕುಲದವರು ಹಡಗುಗಳಲ್ಲಿಯೇ ಉಳಿದದ್ದೇಕೆ?
ಆಶೇರ್ ಕುಲದವರು ತಮ್ಮ ರೇವುಗಳನ್ನು ಬಿಡದೆ ಸಮುದ್ರ ತೀರದಲ್ಲಿ ಸುಮ್ಮನೆ ಕುಳಿತುಬಿಟ್ಟರು.
18ಜೆಬುಲೂನ್ಯರು ತಮ್ಮ ಜೀವವನ್ನು ಮರಣದ ಆಪತ್ತಿಗೆ ಒಪ್ಪಿಸಲು ಸಿದ್ಧರಿದರು,
ನಫ್ತಾಲ್ಯರು ಸಹ ರಣರಂಗದಲ್ಲಿಯೇ ಇದ್ದರು.
19“ಅರಸರು ಬಂದು ಯುದ್ಧಮಾಡಿದರು;
ಕಾನಾನ್ಯ ರಾಜರು ಮೆಗಿದ್ದೋ ನೀರಿನ ಕಾಲುವೆಗಳ ಬಳಿಯಲ್ಲಿರುವ ತಾನಾಕದಲ್ಲಿ ಕೂಡಿಬಂದು ಹೋರಾಡಿದರು.
ಅವರಿಗೆ ದ್ರವ್ಯವೇನೂ ಸಿಕ್ಕಲಿಲ್ಲ.
20ನಕ್ಷತ್ರಗಳೂ ಆಕಾಶಪಥದಲ್ಲಿದ್ದು ಸೀಸೆರನೊಡನೆ ಯುದ್ಧಮಾಡಿದವು.
21ಪೂರ್ವಪ್ರಸಿದ್ಧವಾದ ಕೀಷೋನ್ ಹೊಳೆಯು ಶತ್ರುಗಳನ್ನು ಕೊಚ್ಚಿಕೊಂಡು ಹೋಯಿತು.
ನನ್ನ ಮನವೇ ನೀನು ಧೈರ್ಯದಿಂದ ಮುಂದಕ್ಕೆ ಹೊರಡು.
22ಆಗ ಅತಿವೇಗವಾಗಿ ಓಡುತ್ತಿದ್ದ ಅವರ ಬಲವಾದ ಕುದುರೆಗಳ ಗೊರಸುಗಳ ಪೆಟ್ಟಿನಿಂದ ನೆಲವು ಕಂಪಿಸಿತು.
23ಮೇರೋಜ್ ಊರನ್ನು ಶಪಿಸಿರೆಂದು ಯೆಹೋವನ ದೂತನು ಹೇಳುತ್ತಾನೆ.
‘ಅದರ ನಿವಾಸಿಗಳು ಯೆಹೋವನ ಸಹಾಯಕ್ಕೆ ಬರಲಿಲ್ಲ.
ಯುದ್ಧವೀರರ ಹೋರಾಟದ ವಿರುದ್ಧ ಯೆಹೋವನ ಸಹಾಯಕ್ಕೆ ಬರಲಿಲ್ಲವಲ್ಲಾ;
ಅವರನ್ನು ಶಪಿಸೇ ಶಪಿಸಿರಿ!’
24“ಎಲ್ಲಾ ಸ್ತ್ರೀಯರಲ್ಲಿ ಕೇನ್ಯನಾದ ಹೆಬೆರನ ಹೆಂಡತಿ ಯಾಯೇಲಳೆ ಭಾಗ್ಯವಂತಳು.
ಗುಡಾರಗಳಲ್ಲಿ ವಾಸಿಸುವ ಸ್ತ್ರೀಯರಲ್ಲಿ ಆಕೆಯೇ ಆಶೀರ್ವದಿಸಲ್ಪಟ್ಟವಳು.
25ನೀರು ಕೇಳಿದನು, ಹಾಲು ಕೊಟ್ಟಳು;
ಉತ್ತಮ ಪಾತ್ರೆಯಲ್ಲಿ ಮಜ್ಜಿಗೆ ಕೊಟ್ಟಳು.
26ಕೈಚಾಚಿ ಗೂಟವನ್ನು ತೆಗೆದುಕೊಂಡಳು;
ಬಲಗೈಯಲ್ಲಿ ದೊಡ್ಡ ಸುತ್ತಿಗೆಯನ್ನು ಹಿಡಿದಳು;
ಆ ಸುತ್ತಿಗೆಯಿಂದ ಸೀಸೆರನ ತಲೆಯನ್ನು ಒಡೆದುಬಿಟ್ಟಳು.
ಅವನ ನೆತ್ತಿಗೆ ತಿವಿದು ಜಡಿದಳು.
27ಅವನು ಆಕೆಯ ಕಾಲುಗಳ ಬಳಿಯಲ್ಲಿ ಉರುಳಿ ಬಿದ್ದನು;
ಅವನು ಆಕೆಯ ಕಾಲುಗಳ ಬಳಿಯಲ್ಲಿ ಮುದುರಿಕೊಂಡು ಉರುಳಿದನು.
ಅವನು ಬಿದ್ದಲ್ಲೇ ಸತ್ತನು.
28“ಸೀಸೆರನ ತಾಯಿಯು ಕಿಟಿಕಿಯಿಂದ ನೋಡಿದಳು;
ಸೀಸೆರನ ತಾಯಿಯು ಕಿಟಿಕಿಯ ಜಾಲರಿಗಳಿಂದ ಕೂಗಿದಳು.
‘ಅವನ ರಥವು ಬರುವುದಕ್ಕೆ ಏಕೆ ಇಷ್ಟುಹೊತ್ತಾಯಿತು!
ಅವನ ಕುದುರೆಗಳ ಗೊರಸುಗಳಿಗೆ ಇಷ್ಟು ಸಾವಕಾಶವೇಕೆ’ ಅಂದಳು.
29ಬುದ್ಧಿವಂತೆಯರಾದ ಸ್ತ್ರೀಯರು ಕೊಟ್ಟ ಉತ್ತರವನ್ನೇ
ಈಕೆಯು ತನ್ನಲ್ಲಿ ತಾನೇ ಅಂದುಕೊಳ್ಳುತ್ತಿದ್ದದ್ದು ಏನೆಂದರೆ,
30‘ನಿಶ್ಚಯವಾಗಿ ಅವರಿಗೆ ಕೊಳ್ಳೆ ಸಿಕ್ಕಿರುತ್ತದೆ; ಅದನ್ನು ಹಂಚಿಕೊಳ್ಳುತ್ತಿದ್ದಾರಲ್ಲವೋ?.
ಪ್ರತಿಯೊಬ್ಬ ಪುರುಷನಿಗೆ ಒಬ್ಬಿಬ್ಬರು ಹೆಂಗಸರೂ, ಸೀಸೆರನಿಗೆ ನಾನಾ ವರ್ಣಗಳುಳ್ಳ ಬಟ್ಟೆಗಳೂ, ವಿಚಿತ್ರವಾಗಿ ಕಸೂತಿಹಾಕಿದ ಎರಡು ವಸ್ತ್ರಗಳೂ, #5:30 ಕೊಳ್ಳೆಯವರ ಕಂಠ.ಕಂಠಮಾಲೆಯೂ ದೊರಕಿರುತ್ತವೆ.’
31ಯೆಹೋವನ ಎಲ್ಲಾ ಶತ್ರುಗಳೂ ಹೀಗೆಯೇ ನಾಶವಾಗಲಿ.
ಆತನನ್ನು ಪ್ರೀತಿಸುವ ಭಕ್ತರು ಪ್ರಕಾಶದಿಂದ ಉದಯಿಸುವ ಸೂರ್ಯನಂತಿರಲಿ.”
ಅನಂತರ ದೇಶದಲ್ಲಿ ನಲವತ್ತು ವರ್ಷ ಸಮಾಧಾನವಿತ್ತು.
Currently Selected:
ನ್ಯಾಯ 5: IRVKan
Highlight
Share
Copy

Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.