YouVersion Logo
Search Icon

ಕೊಲೊಸ್ಸೆಯವರಿಗೆ 1:15-20

ಕೊಲೊಸ್ಸೆಯವರಿಗೆ 1:15-20 KANJV-BSI

ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನ ಸ್ಥಾನಹೊಂದಿದವನೂ ಆಗಿದ್ದಾನೆ. ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ ಸಿಂಹಾಸನಗಳಾಗಲಿ ಪ್ರಭುತ್ವಗಳಾಗಲಿ ದೊರೆತನಗಳಾಗಲಿ ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪಟ್ಟವು. ಸರ್ವವು ಆತನ ಮುಖಾಂತರವಾಗಿಯೂ ಆತನಿಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು. ಆತನು ಎಲ್ಲಕ್ಕೂ ಮೊದಲು ಇದ್ದವನು; ಆತನು ಸಮಸ್ತಕ್ಕೂ ಆಧಾರ ಭೂತನು. ಸಭೆಯೆಂಬ ದೇಹಕ್ಕೆ ಆತನು ಶಿರಸ್ಸು; ಆತನು ಆದಿಸಂಭೂತನು. ಎಲ್ಲಾದರಲ್ಲಿ ಪ್ರಮುಖನಾಗುವಂತೆ ಸತ್ತವರೊಳಗಿಂದ ಮೊದಲು ಎದ್ದು ಬಂದವನು ಆತನೇ. ತಂದೆಯಾದ ದೇವರು ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಆತನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ನಿಷ್ಕರ್ಷೆಮಾಡಿದನು.