ಆದರೆ ಯೆಹೋವ ದೇವರು ಹೊಸದನ್ನು ಮಾಡಿ, ಭೂಮಿಯು ತನ್ನ ಬಾಯಿತೆರೆದು, ಇವರನ್ನೂ, ಇವರಿಗಿರುವ ಎಲ್ಲದನ್ನೂ ನುಂಗಿ, ಇವರು ತೀವ್ರವಾಗಿ ಪಾತಾಳಕ್ಕೆ ಇಳಿಯುವಂತೆ ಮಾಡಿ, ಈ ಮನುಷ್ಯರು ಯೆಹೋವ ದೇವರನ್ನು ರೇಗಿಸಿದ್ದಾರೆಂದು ನೀವು ತಿಳಿದುಕೊಳ್ಳುವಿರಿ,” ಎಂದನು.
ಅವನು ಹೇಳ ಬೇಕಾದವುಗಳನ್ನೆಲ್ಲಾ ಹೇಳಿ ಮುಗಿಸಿದಾಗಲೇ, ಅವರ ಕೆಳಗಿರುವ ನೆಲವು ಸೀಳಿ ಭೂಮಿಯು ತನ್ನ ಬಾಯಿತೆರೆದು, ಅವರನ್ನೂ, ಅವರ ಮನೆಗಳನ್ನೂ, ಕೋರಹನಿಗೆ ಸಂಬಂಧಪಟ್ಟ ಸಕಲ ಜನರನ್ನೂ, ಅವರಿಗಿದ್ದದ್ದನ್ನೆಲ್ಲಾ ನುಂಗಿಬಿಟ್ಟಿತು.