1
ಲೂಕ 6:38
ಕನ್ನಡ ಸಮಕಾಲಿಕ ಅನುವಾದ
ಕೊಡಿರಿ, ಆಗ ನಿಮಗೂ ಕೊಡುವರು. ಒಳ್ಳೆಯ ಅಳತೆಯಲ್ಲಿ ಒತ್ತಿ, ಕುಲುಕಿ, ಚೆಲ್ಲುವಂತೆ ಮನುಷ್ಯರು ನಿಮ್ಮ ಮಡಿಲಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು,” ಎಂದರು.
Compare
Explore ಲೂಕ 6:38
2
ಲೂಕ 6:45
ಒಳ್ಳೆಯವನು ತನ್ನ ಹೃದಯದ ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಆದರೆ ಕೆಟ್ಟವನು ತನ್ನ ಹೃದಯದ ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವದನ್ನೇ ಅವನ ಬಾಯಿ ಮಾತನಾಡುತ್ತದೆ.
Explore ಲೂಕ 6:45
3
ಲೂಕ 6:35
ಆದರೆ ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಅವರಿಗೆ ಒಳ್ಳೆಯದನ್ನು ಮಾಡಿರಿ. ಏನನ್ನೂ ತಿರುಗಿ ನಿರೀಕ್ಷಿಸದೆ ಸಾಲ ಕೊಡಿರಿ, ಆಗ ನಿಮ್ಮ ಪ್ರತಿಫಲ ದೊಡ್ಡದಾಗಿರುವುದು. ನೀವು ಮಹೋನ್ನತ ದೇವರ ಮಕ್ಕಳಾಗಿರುವಿರಿ, ಅವರು ಕೃತಜ್ಞತೆಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವರಾಗಿದ್ದಾರೆ.
Explore ಲೂಕ 6:35
4
ಲೂಕ 6:36
ನಿಮ್ಮ ತಂದೆಯು ಕರುಣೆಯುಳ್ಳವರಾಗಿರುವ ಪ್ರಕಾರ, ನೀವೂ ಕರುಣೆಯುಳ್ಳವರಾಗಿರಿ.
Explore ಲೂಕ 6:36
5
ಲೂಕ 6:37
“ತೀರ್ಪುಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ. ಇತರರನ್ನು ಅಪರಾಧಿಯೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವುದಿಲ್ಲ. ಕ್ಷಮಿಸಿರಿ, ಆಗ ನಿಮ್ಮನ್ನೂ ಕ್ಷಮಿಸುವರು.
Explore ಲೂಕ 6:37
6
ಲೂಕ 6:27-28
“ನನ್ನನ್ನು ಆಲಿಸುತ್ತಿರುವವರೆ ನನ್ನ ಮಾತನ್ನು ಕೇಳಿರಿ: ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಮಾಡುವವರಿಗೆ ಒಳ್ಳೆಯದನ್ನು ಮಾಡಿರಿ, ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ಅವಮಾನ ಪಡಿಸುವವರಿಗೋಸ್ಕರ ಪ್ರಾರ್ಥಿಸಿರಿ.
Explore ಲೂಕ 6:27-28
7
ಲೂಕ 6:31
ಇತರರು ನಿಮಗೆ ಏನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿರಿ.
Explore ಲೂಕ 6:31
8
ಲೂಕ 6:29-30
ಒಂದು ಕೆನ್ನೆಯ ಮೇಲೆ ನಿನ್ನನ್ನು ಹೊಡೆಯುವವನಿಗೆ ಮತ್ತೊಂದನ್ನು ಸಹ ತೋರಿಸು. ನಿನ್ನ ಮೇಲಂಗಿಯನ್ನು ತೆಗೆದುಕೊಳ್ಳುವವನಿಗೆ, ನಿನ್ನ ಒಳ ಅಂಗಿಯನ್ನು ಕೊಟ್ಟುಬಿಡು. ನಿನ್ನಿಂದ ಕೇಳುವ ಪ್ರತಿಯೊಬ್ಬರಿಗೂ ಕೊಡು, ನಿನ್ನ ಸೊತ್ತನ್ನು ತೆಗೆದುಕೊಳ್ಳುವವನಿಂದ, ಅವುಗಳನ್ನು ತಿರುಗಿ ಕೇಳಬೇಡ.
Explore ಲೂಕ 6:29-30
9
ಲೂಕ 6:43
“ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ, ಇಲ್ಲವೆ ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ.
Explore ಲೂಕ 6:43
10
ಲೂಕ 6:44
ಪ್ರತಿಯೊಂದು ಮರವು ಅದರ ಫಲದಿಂದಲೇ ಗೊತ್ತಾಗುವುದು. ಏಕೆಂದರೆ ಮನುಷ್ಯರು ಮುಳ್ಳುಗಿಡಗಳಲ್ಲಿ ಅಂಜೂರಗಳನ್ನು ಕೀಳುವುದಿಲ್ಲ, ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿಗಳನ್ನು ಕೊಯ್ಯುವುದಿಲ್ಲ.
Explore ಲೂಕ 6:44
Home
Bible
Plans
Videos