ಇದಲ್ಲದೆ ಅವರು ಎಫ್ರಾಯೀಮಿಗೆ ಹೋಗುವ ಯೊರ್ದನಿನ ಹಾಯಗಡಗಳನ್ನೆಲ್ಲಾ ಹಿಡಿದರು. ತಪ್ಪಿಸಿಕೊಂಡ ಎಫ್ರಾಯೀಮ್ಯರಲ್ಲೊಬ್ಬನು ಅಲ್ಲಿಗೆ ಬಂದು ನನ್ನನ್ನು ದಾಟಗೊಡಿಸಿರಿ ಎಂದು ಅವರನ್ನು ಕೇಳಿದರೆ ಅವರು, “ನೀನು ಎಫ್ರಾಯೀಮ್ಯನೋ” ಎಂದು ಕೇಳುವರು. ಅವನು ಅಲ್ಲವೆಂದರೆ ಅವನಿಗೆ, “ನೀನು ಷಿಬ್ಬೋಲೆತ್ ಎಂದು ಹೇಳು” ಎಂದು ಹೇಳುವರು. ಹಾಗೆ ಅನ್ನಲಿಕ್ಕೆ ಬಾರದೆ ಅವನು ಸಿಬ್ಬೋಲೆತ್ ಅನ್ನುವನು. ಕೂಡಲೆ ಅವರು ಅವನನ್ನು ಹಿಡಿದು ಯೊರ್ದನಿನ ಹಾಯಗಡಗಳ (ಕಾಲ್ನಡಿಗೆಯಿಂದ ದಾಟಬಹುದಾದ ನಿರುಳ್ಳಸ್ಥಳ) ಬಳಿಯಲ್ಲೇ ಕೊಂದುಹಾಕುವರು. ಹೀಗೆ ಆ ಕಾಲದಲ್ಲಿ ಎಫ್ರಾಯೀಮ್ಯರೊಳಗೆ ನಲ್ವತ್ತೆರಡು ಸಾವಿರ ಜನರು ಹತರಾದರು.