1
ಪ್ರಸ 8:15
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಆದುದರಿಂದಲೇ ನಾನು ಸಂತೋಷವನ್ನು ಹೊಗಳಿದೆನು. ಏಕೆಂದರೆ ಮನುಷ್ಯನಿಗೆ ಲೋಕದಲ್ಲಿ ಕುಡಿಯುವುದೂ, ತಿನ್ನುವುದೂ, ಸಂತೋಷಪಡುವುದೇ ಹೊರತು ಬೇರೇನೂ ಒಳ್ಳೆಯದು ಇಲ್ಲ. ಲೋಕದಲ್ಲಿ ದೇವರು ಅವನಿಗೆ ಅನುಗ್ರಹಿಸುವ ದಿನಗಳಲ್ಲಿ ಅವನು ಪಡುವ ಪ್ರಯಾಸದಲ್ಲಿ ಸಂತೋಷವೇ ಸೇರಿರುವುದು.
Compare
Explore ಪ್ರಸ 8:15
2
ಪ್ರಸ 8:12
ಪಾಪಿಯು ನೂರು ಸಲ ಅಧರ್ಮ ಮಾಡಿ ಬಹು ಕಾಲ ಬದುಕಿದರೂ, ದೇವರ ಮುಂದೆ ಹೆದರಿ, ಆತನಲ್ಲಿ ಭಯಭಕ್ತಿಯುಳ್ಳವರಿಗೆ ಒಳ್ಳೆಯದೇ ಆಗುವುದೆಂದು ಬಲ್ಲೆನು.
Explore ಪ್ರಸ 8:12
3
ಪ್ರಸ 8:6
ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲ ಮತ್ತು ಒಂದು ಕ್ರಮ ಇರುತ್ತದೆಯಲ್ಲವೇ, ಮನುಷ್ಯನು ಪಡುವ ಕಷ್ಟವು ಅವನಿಗೆ ಘೋರವಾಗಿದೆ.
Explore ಪ್ರಸ 8:6
4
ಪ್ರಸ 8:8
ಗಾಳಿಯನ್ನು ತಡೆಯುವ ಶಕ್ತಿಯು ಹೇಗೆ ಯಾರಿಗೂ ಇಲ್ಲವೋ, ಹಾಗೆಯೇ ತಮ್ಮ ಮರಣ ದಿನವನ್ನು ತಡೆಯುವ ಶಕ್ತಿಯು ಯಾರಿಗೂ ಇಲ್ಲ. ಯುದ್ಧ ಕಾಲದಲ್ಲಿ ಹೇಗೆ ವಿರಾಮ ದೊರೆಯುವುದಿಲ್ಲವೋ, ಹಾಗೆಯೇ ದುಷ್ಟನಿಗೆ ದುಷ್ಟತನದಿಂದ ಬಿಡುಗಡೆಯೇ ಇಲ್ಲ.
Explore ಪ್ರಸ 8:8
5
ಪ್ರಸ 8:11
ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೇ ನಡೆಯದಿರುವ ಕಾರಣ ಅಪರಾಧ ಮಾಡಬೇಕೆಂಬ ಯೋಚನೆಯು ಮನುಷ್ಯರ ಹೃದಯದಲ್ಲಿ ತುಂಬಿ ತುಳುಕುವುದು.
Explore ಪ್ರಸ 8:11
6
ಪ್ರಸ 8:14
ಲೋಕದಲ್ಲಿ ನಡೆಯುವ ವ್ಯರ್ಥಕಾರ್ಯವು ಒಂದುಂಟು. ದುಷ್ಟರ ನಡತೆಗೆ ತಕ್ಕ ಗತಿಯು ಶಿಷ್ಟನಿಗೆ ಆಗುವುದು. ಶಿಷ್ಟರ ನಡತೆಗೆ ತಕ್ಕ ಗತಿಯು ದುಷ್ಟರಿಗೆ ಆಗುವುದು. ಇದು ವ್ಯರ್ಥವೆಂದು ನಾನು ಹೇಳಿದೆನು.
Explore ಪ್ರಸ 8:14
7
ಪ್ರಸ 8:7
ಮುಂದೆ ಏನಾಗುವುದು ಯಾರಿಗೂ ಗೊತ್ತಿಲ್ಲ. ಮುಂದೆ ಆಗುವುದನ್ನು ಅವನಿಗೆ ವಿವರಿಸಬಲ್ಲವರು ಯಾರು?
Explore ಪ್ರಸ 8:7
Home
Bible
Plans
Videos