ಆದರೆ ಆ ದಿನದಲ್ಲಿ ನಿನ್ನನ್ನು ನಾನು ಉದ್ಧರಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ. ನೀನು ಯಾರಿಗಾಗಿ ಭಯಪಡುತ್ತಿಯೋ ಅವರ ಕೈಗೆ ಸಿಕ್ಕುವುದಿಲ್ಲ. ನೀನು ನನ್ನಲ್ಲಿ ಭರವಸೆಯಿಟ್ಟ ಕಾರಣ ನಿನ್ನನ್ನು ರಕ್ಷಿಸಿಯೇ ರಕ್ಷಿಸುವೆನು. ನೀನು ಕತ್ತಿಗೆ ತುತ್ತಾಗಲಾರೆ. ಅದರ ಬಾಯಿಂದ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ. ಇದು ಸರ್ವೇಶ್ವರನಾದ ನನ್ನ ವಾಣಿ.”