1
ಮಾರ್ಕ 10:45
ಕನ್ನಡ ಸತ್ಯವೇದವು J.V. (BSI)
ಮನುಷ್ಯಕುಮಾರನು ಸಹ ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು.
Compare
Explore ಮಾರ್ಕ 10:45
2
ಮಾರ್ಕ 10:27
ಯೇಸು ಅವರನ್ನು ದೃಷ್ಟಿಸಿ ನೋಡಿ - ಇದು ಮನುಷ್ಯರಿಗೆ ಅಸಾಧ್ಯ; ದೇವರಿಗೆ ಅಸಾಧ್ಯವಲ್ಲ; ದೇವರಿಗೆ ಎಲ್ಲವು ಸಾಧ್ಯವೇ ಅಂದನು.
Explore ಮಾರ್ಕ 10:27
3
ಮಾರ್ಕ 10:52
ಯೇಸು ಅವನಿಗೆ - ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿ ಅದೆ ಎಂದು ಹೇಳಿದನು; ಕೂಡಲೇ ಅವನಿಗೆ ಕಣ್ಣು ಬಂದವು; ಅವನು ಆ ದಾರಿಯಲ್ಲಿ ಆತನ ಹಿಂದೆ ಹೋದನು.
Explore ಮಾರ್ಕ 10:52
4
ಮಾರ್ಕ 10:9
ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು ಎಂದು ಹೇಳಿದನು.
Explore ಮಾರ್ಕ 10:9
5
ಮಾರ್ಕ 10:21
ಯೇಸು ಅವನನ್ನು ದೃಷ್ಟಿಸಿನೋಡಿ ಪ್ರೀತಿಸಿ ಅವನಿಗೆ - ನಿನಗೆ ಒಂದು ಕಡಿಮೆಯಾಗಿದೆ; ಹೋಗು, ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು.
Explore ಮಾರ್ಕ 10:21
6
ಮಾರ್ಕ 10:51
ಯೇಸು ಅವನನ್ನು - ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ ಎಂದು ಕೇಳಲು ಆ ಕುರುಡನು - ನನಗೆ ಕಣ್ಣು ಬರುವಂತೆ ಮಾಡಬೇಕು, ಗುರುವೇ, ಅಂದನು.
Explore ಮಾರ್ಕ 10:51
7
ಮಾರ್ಕ 10:43
ಆದರೆ ನಿಮ್ಮಲ್ಲಿ ಹಾಗಿರಬಾರದು; ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು
Explore ಮಾರ್ಕ 10:43
8
ಮಾರ್ಕ 10:15
ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವದಿಲ್ಲವೋ ಅವನು ಅದರಲ್ಲಿ ಸೇರುವದೇ ಇಲ್ಲ ಎಂದು ಹೇಳಿ
Explore ಮಾರ್ಕ 10:15
9
ಮಾರ್ಕ 10:31
ಆದರೆ ಬಹುಮಂದಿ ಮೊದಲಿನವರು ಕಡೆಯವರಾಗುವರು, ಕಡೆಯವರು ಮೊದಲಿನವರಾಗುವರು ಎಂದು ಹೇಳಿದನು.
Explore ಮಾರ್ಕ 10:31
10
ಮಾರ್ಕ 10:6-8
ದೇವರಾದರೋ ಸೃಷ್ಟಿಯ ಮೊದಲಿನಿಂದಲೇ ಮನುಷ್ಯರನ್ನು ಗಂಡುಹೆಣ್ಣಾಗಿ ನಿರ್ಮಿಸಿದನೆಂತಲೂ ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಂಡು ಅವರಿಬ್ಬರು ಒಂದೇ ಶರೀರವಾಗಿರುವರೆಂತಲೂ ಬರೆದದೆ. ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ.
Explore ಮಾರ್ಕ 10:6-8
Home
Bible
Plans
Videos