1
ಮತ್ತಾಯ 19:26
ಕನ್ನಡ ಸತ್ಯವೇದವು J.V. (BSI)
ಯೇಸು ಅವರನ್ನು ದೃಷ್ಟಿಸಿ ನೋಡಿ - ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ ಅಂದನು.
Compare
Explore ಮತ್ತಾಯ 19:26
2
ಮತ್ತಾಯ 19:6
ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು ಅಂದನು.
Explore ಮತ್ತಾಯ 19:6
3
ಮತ್ತಾಯ 19:4-5
ಆತನು - ಮನುಷ್ಯರನ್ನು ನಿರ್ಮಾಣ ಮಾಡಿದವನು ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ ಅವರ ವಿಷಯದಲ್ಲಿ - ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ಹೇಳಿದನೆಂಬದಾಗಿ ನೀವು ಓದಲಿಲ್ಲವೋ?
Explore ಮತ್ತಾಯ 19:4-5
4
ಮತ್ತಾಯ 19:14
ಆದರೆ ಯೇಸು - ಮಕ್ಕಳನ್ನು ಬಿಡಿರಿ; ನನ್ನ ಹತ್ತರ ಬರುವದಕ್ಕೆ ಅವುಗಳಿಗೆ ಅಡ್ಡಿಮಾಡಬೇಡಿರಿ; ಪರಲೋಕರಾಜ್ಯವು ಇಂಥವರದೇ ಎಂದು ಹೇಳಿ
Explore ಮತ್ತಾಯ 19:14
5
ಮತ್ತಾಯ 19:30
ಆದರೆ ಬಹು ಮಂದಿ ಮೊದಲಿನವರು ಕಡೆಯವರಾಗುವರು, ಕಡೆಯವರು ಮೊದಲಿನವರಾಗುವರು.
Explore ಮತ್ತಾಯ 19:30
6
ಮತ್ತಾಯ 19:29
ಮತ್ತು ನನ್ನ ಹೆಸರಿನ ನಿವಿುತ್ತ ಮನೆಗಳನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಂದೆಯನ್ನಾಗಲಿ ತಾಯಿಯನ್ನಾಗಲಿ ಮಕ್ಕಳನ್ನಾಗಲಿ ಭೂವಿುಯನ್ನಾಗಲಿ ಬಿಟ್ಟುಬಿಟ್ಟಿರುವವರೆಲ್ಲರಿಗೆ ಅನೇಕ ಪಾಲು ಹೆಚ್ಚಾಗಿ ಸಿಕ್ಕುವದು; ಮತ್ತು ಅವರು ನಿತ್ಯಜೀವಕ್ಕೆ ಬಾಧ್ಯರಾಗುವರು.
Explore ಮತ್ತಾಯ 19:29
7
ಮತ್ತಾಯ 19:21
ಯೇಸು ಅವನಿಗೆ - ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗಿ ನಿನ್ನ ಆಸ್ತಿಯನ್ನು ಮಾರಿ ಬಡವರಿಗೆ ಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು.
Explore ಮತ್ತಾಯ 19:21
8
ಮತ್ತಾಯ 19:17
ಆತನು ಅವನಿಗೆ - ಒಳ್ಳೇದನ್ನು ಕುರಿತು ನನ್ನನ್ನು ಯಾಕೆ ಕೇಳುತ್ತೀ? ಒಳ್ಳೆಯವನು ಒಬ್ಬನೇ. ಆದರೆ ಆ ಜೀವದಲ್ಲಿ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ಸರಿಯಾಗಿ ನಡೆದುಕೋ ಎಂದು ಹೇಳಿದ್ದಕ್ಕೆ
Explore ಮತ್ತಾಯ 19:17
9
ಮತ್ತಾಯ 19:24
ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವದು ಸುಲಭ ಎಂದು ನಿಮಗೆ ತಿರಿಗಿ ಹೇಳುತ್ತೇನೆ ಅಂದನು.
Explore ಮತ್ತಾಯ 19:24
10
ಮತ್ತಾಯ 19:9
ಮತ್ತು ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆಂದು ನಿಮಗೆ ಹೇಳುತ್ತೇನೆ ಅಂದನು.
Explore ಮತ್ತಾಯ 19:9
11
ಮತ್ತಾಯ 19:23
ಆಗ ಯೇಸು ತನ್ನ ಶಿಷ್ಯರನ್ನು ನೋಡಿ - ನಿಮಗೆ ಸತ್ಯವಾಗಿ ಹೇಳುತ್ತೇನೆ, ಐಶ್ವರ್ಯವಂತನು ಪರಲೋಕರಾಜ್ಯದಲ್ಲಿ ಸೇರುವದು ಕಷ್ಟ.
Explore ಮತ್ತಾಯ 19:23
Home
Bible
Plans
Videos