1
ಮತ್ತಾಯ 13:23
ಕನ್ನಡ ಸತ್ಯವೇದವು J.V. (BSI)
ಒಬ್ಬನು ವಾಕ್ಯವನ್ನು ಕೇಳಿ ತಿಳುಕೊಂಡು ಫಲವಂತನಾಗಿ ನೂರರಷ್ಟಾಗಲಿ ಅರುವತ್ತರಷ್ಟಾಗಲಿ ಮೂವತ್ತರಷ್ಟಾಗಲಿ ಫಲವನ್ನು ಕೊಡುತ್ತಾನೆ; ಇವನೇ ಒಳ್ಳೆಯ ನೆಲವಾಗಿರುವವನು ಎಂದು ಹೇಳಿದನು.
Compare
Explore ಮತ್ತಾಯ 13:23
2
ಮತ್ತಾಯ 13:22
ಒಬ್ಬನು ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಯೂ ಐಶ್ವರ್ಯದಿಂದುಂಟಾಗುವ ಮೋಸವೂ ಆ ವಾಕ್ಯವನ್ನು ಅಡಗಿಸಿಬಿಡುವದರಿಂದ, ಫಲವನ್ನು ಕೊಡದೆ ಇರುತ್ತಾನೆ; ಇವನೇ ಮುಳ್ಳುಗಿಡಗಳಲ್ಲಿ ಬೀಜ ಬಿದ್ದ ನೆಲವಾಗಿರುವವನು.
Explore ಮತ್ತಾಯ 13:22
3
ಮತ್ತಾಯ 13:18,19
ಬಿತ್ತುವವನ ವಿಷಯವಾದ ಸಾಮ್ಯದ ಅರ್ಥವನ್ನು ಕೇಳಿರಿ - ಯಾವನಾದರೂ ಪರಲೋಕರಾಜ್ಯದ ವಾಕ್ಯವನ್ನು ಕೇಳಿ ತಿಳುಕೊಳ್ಳದೆ ಇರುವಲ್ಲಿ ಸೈತಾನನು ಬಂದು ಆ ಮನುಷ್ಯನ ಮನಸ್ಸಿನಲ್ಲಿ ಬಿತ್ತಿದ್ದನ್ನು ತೆಗೆದುಹಾಕುತ್ತಾನೆ; ಈ ಮನುಷ್ಯನೇ ಬೀಜ ಬಿದ್ದ ದಾರೀ ಮಗ್ಗುಲಾಗಿರುವವನು.
Explore ಮತ್ತಾಯ 13:18,19
4
ಮತ್ತಾಯ 13:20-21
ಒಬ್ಬನು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾನೆ; ತನಗೆ ಬೇರಿಲ್ಲದ ಕಾರಣ ಇವನು ಸ್ವಲ್ಪ ಕಾಲ ಮಾತ್ರವೇ ಇದ್ದು ಆ ವಾಕ್ಯದ ನಿವಿುತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿ ಬೀಳುತ್ತಾನೆ; ಇವನೇ ಬೀಜ ಬಿದ್ದ ಬಂಡೆಯ ನೆಲವಾಗಿರುವವನು.
Explore ಮತ್ತಾಯ 13:20-21
5
ಮತ್ತಾಯ 13:44
ಪರಲೋಕರಾಜ್ಯವು ಹೊಲದಲ್ಲಿ ಹೂಳಿಟ್ಟ ದ್ರವ್ಯಕ್ಕೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಬಿಟ್ಟು ಅದರಿಂದಾದ ಸಂತೋಷದಿಂದ ತನ್ನ ಬದುಕನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.
Explore ಮತ್ತಾಯ 13:44
6
ಮತ್ತಾಯ 13:8
ಇನ್ನು ಕೆಲವು ಒಳ್ಳೆಯ ನೆಲದಲ್ಲಿ ಬಿದ್ದು ಒಂದು ನೂರರಷ್ಟು, ಒಂದು ಅರುವತ್ತರಷ್ಟು, ಒಂದು ಮೂವತ್ತರಷ್ಟು ಫಲವನ್ನು ಕೊಟ್ಟವು.
Explore ಮತ್ತಾಯ 13:8
7
ಮತ್ತಾಯ 13:30
ಸುಗ್ಗೀಕಾಲದ ತನಕ ಎರಡೂ ಕೂಡ ಬೆಳೆಯಲಿ; ಸುಗ್ಗೀಕಾಲದಲ್ಲಿ ನಾನು ಕೊಯ್ಯುವವರಿಗೆ - ಮೊದಲು ಹಣಜಿಯನ್ನು ಆರಿಸಿತೆಗೆದು ಅದನ್ನು ಸುಡುವದಕ್ಕೆ ಹೊರೆಕಟ್ಟಿಹಾಕಿ, ಗೋದಿಯನ್ನು ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು ಅಂದನು.
Explore ಮತ್ತಾಯ 13:30
Home
Bible
Plans
Videos