1
ಆದಿಕಾಂಡ 37:5
ಕನ್ನಡ ಸತ್ಯವೇದವು J.V. (BSI)
ಒಂದು ದಿನ ಯೋಸೇಫನು ಕನಸುಕಂಡು ಅದನ್ನು ತನ್ನ ಅಣ್ಣಂದಿರಿಗೆ ತಿಳಿಸಲು ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು.
Compare
Explore ಆದಿಕಾಂಡ 37:5
2
ಆದಿಕಾಂಡ 37:3
ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನಲ್ಲಿ ಹುಟ್ಟಿದವನಾದ್ದರಿಂದ ಇಸ್ರಾಯೇಲನು ಅವನನ್ನು ತನ್ನ ಎಲ್ಲಾ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸಿ ಅವನಿಗೆ ನಿಲುವಂಗಿಯನ್ನು ಮಾಡಿಸಿಕೊಟ್ಟಿದ್ದನು.
Explore ಆದಿಕಾಂಡ 37:3
3
ಆದಿಕಾಂಡ 37:4
ಅವನ ಅಣ್ಣತಮ್ಮಂದಿರು - ನಮ್ಮ ತಂದೆ ತನ್ನ ಎಲ್ಲಾ ಮಕ್ಕಳಿಗಿಂತಲೂ ಇವನನ್ನೇ ಹೆಚ್ಚಾಗಿ ಪ್ರೀತಿಸುತ್ತಾನೆಂದು ನೋಡಿ ಯೋಸೇಫನನ್ನು ಹಗೆಮಾಡಿ ಅವನೊಡನೆ ಸ್ನೇಹಭಾವದಿಂದ ಮಾತಾಡಲಾರದೆ ಹೋದರು.
Explore ಆದಿಕಾಂಡ 37:4
4
ಆದಿಕಾಂಡ 37:9
ಅವನು ಇನ್ನೊಂದು ಕನಸು ಕಂಡು ಅದನ್ನೂ ತನ್ನ ಅಣ್ಣಂದಿರಿಗೆ ತಿಳಿಸಿದನು. ಅವನು ಅವರಿಗೆ - ಇನ್ನೊಂದು ಕನಸು ಕಂಡಿದ್ದೇನೆ; ಅದರಲ್ಲಿ ಸೂರ್ಯಚಂದ್ರರೂ ಹನ್ನೊಂದು ನಕ್ಷತ್ರಗಳೂ ನನಗೆ ಅಡ್ಡಬಿದ್ದವು ಎಂದು ಹೇಳಿದನು.
Explore ಆದಿಕಾಂಡ 37:9
5
ಆದಿಕಾಂಡ 37:11
ಯೋಸೇಫನ ಅಣ್ಣಂದಿರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು; ಆದರೆ ಅವನ ತಂದೆಯು ಅವನ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡನು.
Explore ಆದಿಕಾಂಡ 37:11
6
ಆದಿಕಾಂಡ 37:6-7
ಅವನು ಅವರಿಗೆ - ನಾನು ಕನಸಿನಲ್ಲಿ ಕಂಡದ್ದನ್ನು ಹೇಳುತ್ತೇನೆ, ಕೇಳಿರಿ. ಆ ಕನಸಿನಲ್ಲಿ ನಾವು ಹೊಲದಲ್ಲಿ ಸಿವುಡುಗಳನ್ನು ಕಟ್ಟುತ್ತಾ ಇದ್ದೆವು; ಆಗ ನನ್ನ ಸಿವುಡು ಎದ್ದು ನಿಲ್ಲಲು ನಿಮ್ಮ ಸಿವುಡುಗಳು ಸುತ್ತಲೂ ಬಂದು ನನ್ನ ಸಿವುಡಿಗೆ ಅಡ್ಡಬಿದ್ದದ್ದನ್ನು ಕಂಡೆನು ಎಂದು ಹೇಳಿದನು.
Explore ಆದಿಕಾಂಡ 37:6-7
7
ಆದಿಕಾಂಡ 37:20
ನಾವು ಅವನನ್ನು ಕೊಂದು ಈ ಗುಂಡಿಗಳಲ್ಲಿ ಒಂದರೊಳಗೆ ಹಾಕಿ ದುಷ್ಟಮೃಗವು ಅವನನ್ನು ತಿಂದುಬಿಟ್ಟಿತೆಂದು ಹೇಳೋಣ ಬನ್ನಿ; ಆಗ ಅವನ ಕನಸುಗಳು ಏನಾಗುವವೋ ನೋಡೋಣ ಎಂದು ಮಾತಾಡಿಕೊಂಡರು.
Explore ಆದಿಕಾಂಡ 37:20
8
ಆದಿಕಾಂಡ 37:28
(ಅಷ್ಟರಲ್ಲಿ ವಿುದ್ಯಾನ್ಯರಾದ ವರ್ತಕರು ಹಾದುಹೋಗುತ್ತಿದ್ದರು.) ಅವರು ಯೋಸೇಫನನ್ನು ಗುಂಡಿಯೊಳಗಿಂದ ಎತ್ತಿ ಆ ಇಷ್ಮಾಯೇಲ್ಯರಿಗೆ ಇಪ್ಪತ್ತು ರೂಪಾಯಿಗಳಿಗೆ ಮಾರಿಬಿಟ್ಟರು. ಇವರು ಅವನನ್ನು ಐಗುಪ್ತದೇಶಕ್ಕೆ ತೆಗೆದುಕೊಂಡು ಹೋದರು.
Explore ಆದಿಕಾಂಡ 37:28
9
ಆದಿಕಾಂಡ 37:19
ಅವರು ಒಬ್ಬರಿಗೊಬ್ಬರು - ಅಗೋ, ಆ ಕನಸಿನವನು ಬರುತ್ತಾನೆ
Explore ಆದಿಕಾಂಡ 37:19
10
ಆದಿಕಾಂಡ 37:18
ಅವರು ಅವನನ್ನು ದೂರದಿಂದ ನೋಡಿ ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲುವದಕ್ಕೆ ಒಳಸಂಚುಮಾಡಿಕೊಂಡರು.
Explore ಆದಿಕಾಂಡ 37:18
11
ಆದಿಕಾಂಡ 37:22
ರೂಬೇನನು ಅವನನ್ನು ಅವರ ಕೈಯಿಂದ ತಪ್ಪಿಸಿ ತಂದೆಗೆ ತಿರಿಗಿ ಒಪ್ಪಿಸಬೇಕೆಂದು ಅವರಿಗೆ - ಪ್ರಾಣಹತ್ಯ ಮಾಡಬೇಡಿರಿ; ಅವನನ್ನು ಕಾಡಿನಲ್ಲಿರುವ ಈ ಗುಂಡಿಯೊಳಗೆ ಹಾಕಬಹುದು; ಅವನ ಮೇಲೆ ಕೈಹಾಕಬೇಡಿರಿ ಎಂದು ಹೇಳಿದನು.
Explore ಆದಿಕಾಂಡ 37:22
Home
Bible
Plans
Videos