1
ಆದಿಕಾಂಡ 35:11-12
ಕನ್ನಡ ಸತ್ಯವೇದವು J.V. (BSI)
ಇದಲ್ಲದೆ ನಾನು ಸರ್ವಶಕ್ತನಾದ ದೇವರು. ನೀನು ಬಹು ಸಂತಾನವುಳ್ಳವನಾಗಿ ಹೆಚ್ಚು. ನಿನ್ನಿಂದ ಜನಾಂಗವುಂಟಾಗುವದು; ಅನೇಕ ಜನಾಂಗಗಳೂ ಅರಸರೂ ನಿನ್ನಿಂದ ಹುಟ್ಟುವರು. ನಾನು ಅಬ್ರಹಾಮ್ ಇಸಾಕರಿಗೆ ವಾಗ್ದಾನಮಾಡಿದ ದೇಶವನ್ನು ನಿನಗೂ ನಿನ್ನ ತರುವಾಯ ಬರುವ ನಿನ್ನ ಸಂತತಿಗೂ ಕೊಡುವೆನು ಎಂದು ಹೇಳಿ
Compare
Explore ಆದಿಕಾಂಡ 35:11-12
2
ಆದಿಕಾಂಡ 35:3
ಕಷ್ಟಕಾಲದಲ್ಲಿ ನನ್ನ ವಿಜ್ಞಾಪನೆಯನ್ನು ಲಾಲಿಸಿ ನಾನು ಹೋದ ಮಾರ್ಗದಲ್ಲೆಲ್ಲಾ ನನ್ನ ಸಂಗಡ ಇದ್ದ ದೇವರಿಗೆ ಅಲ್ಲಿ ಯಜ್ಞವೇದಿಯನ್ನು ಕಟ್ಟಿಸುತ್ತೇನೆ ಎಂದು ಹೇಳಿದನು.
Explore ಆದಿಕಾಂಡ 35:3
3
ಆದಿಕಾಂಡ 35:10
ದೇವರು ಅವನಿಗೆ - ನಿನ್ನ ಹೆಸರು ಯಾಕೋಬನಲ್ಲವೇ; ಇನ್ನು ಮೇಲೆ ನೀನು ಯಾಕೋಬನೆನಿಸಿಕೊಳ್ಳದೆ ಇಸ್ರಾಯೇಲನೆನಿಸಿಕೊಳ್ಳಬೇಕು ಎಂದು ಹೇಳಿ ಅವನಿಗೆ ಇಸ್ರಾಯೇಲ ಎಂದು ಹೆಸರಿಟ್ಟನು.
Explore ಆದಿಕಾಂಡ 35:10
4
ಆದಿಕಾಂಡ 35:2
ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ - ನಿಮ್ಮಲ್ಲಿರುವ ಅನ್ಯದೇವರುಗಳನ್ನು ತಳ್ಳಿಬಿಟ್ಟು ನಿಮ್ಮನ್ನು ಶುದ್ಧೀಕರಿಸಿಕೊಂಡು ಮಡಿವಸ್ತ್ರಗಳನ್ನು ಹಾಕಿಕೊಳ್ಳಿರಿ; ನಾವು ಬೇತೇಲಿಗೆ ಹೊರಟುಹೋಗೋಣ.
Explore ಆದಿಕಾಂಡ 35:2
5
ಆದಿಕಾಂಡ 35:1
ದೇವರು ಯಾಕೋಬನಿಗೆ - ನೀನು ಈ ಸ್ಥಳವನ್ನು ಬಿಟ್ಟು ಗಟ್ಟಾಹತ್ತಿ ಬೇತೇಲಿಗೆ ಹೋಗಿ ಅಲ್ಲೇ ವಾಸಮಾಡು. ನೀನು ನಿನ್ನ ಅಣ್ಣನಾದ ಏಸಾವನ ಬಳಿಯಿಂದ ಓಡಿಹೋದ ಕಾಲದಲ್ಲಿ ದೇವರು ಅಲ್ಲಿ ನಿನಗೆ ದರ್ಶನಕೊಟ್ಟನಲ್ಲಾ; ಆತನಿಗಾಗಿ ಯಜ್ಞವೇದಿಯನ್ನು ಕಟ್ಟಿಸು ಎಂದು ಹೇಳಿದನು.
Explore ಆದಿಕಾಂಡ 35:1
6
ಆದಿಕಾಂಡ 35:18
ಆದರೆ ರಾಹೇಲಳು ಸತ್ತುಹೋದಳು; ಪ್ರಾಣಹೋಗುತ್ತಿರುವಾಗ ಆಕೆಯು ಆ ಮಗುವಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅದರ ತಂದೆಯು ಅದಕ್ಕೆ ಬೆನ್ಯಾಮೀನ್ ಎಂದು ಹೆಸರಿಟ್ಟನು. ಹಾಗೆ ರಾಹೇಲಳು ಮೃತಪಟ್ಟಳು.
Explore ಆದಿಕಾಂಡ 35:18
Home
Bible
Plans
Videos