ಯಾಕೋಬನು ಅಲ್ಲಿ - ದೇವರು ನನ್ನ ಸಂಗಡ ಇದ್ದು ನಾನು ಹೋಗುವ ಈ ಮಾರ್ಗದಲ್ಲಿ ನನ್ನನ್ನು ಕಾಪಾಡಿ ತಿನ್ನುವದಕ್ಕೆ ಆಹಾರವನ್ನೂ ಉಡುವದಕ್ಕೆ ವಸ್ತ್ರವನ್ನೂ ಕೊಟ್ಟು ತಿರಿಗಿ ನನ್ನನ್ನು ತಂದೆಯ ಮನೆಗೆ ಸುರಕ್ಷಿತವಾಗಿ ಬರಮಾಡಿದರೆ ಯೆಹೋವನೇ ನನ್ನ ದೇವರಾಗಿರುವನು. ಮತ್ತು ನಾನು ಕಂಬವಾಗಿ ನಿಲ್ಲಿಸಿರುವ ಈ ಕಲ್ಲು ದೇವರ ಮನೆಯಾಗುವದು. ಇದಲ್ಲದೆ ನಿನ್ನಿಂದ ನನಗೆ ಬರುವ ಎಲ್ಲಾ ಆಸ್ತಿಯಲ್ಲಿ ಹತ್ತರಲ್ಲೊಂದು ಪಾಲನ್ನು ನಿನಗೆ ಸಮರ್ಪಿಸುವೆನೆಂಬದಾಗಿ ಮಾತುಕೊಡುತ್ತೇನೆ ಎಂದು ಹರಕೆಮಾಡಿಕೊಂಡನು.