1
ಆದಿಕಾಂಡ 22:14
ಕನ್ನಡ ಸತ್ಯವೇದವು J.V. (BSI)
ಆ ಸ್ಥಳಕ್ಕೆ ಯೆಹೋವ ಯೀರೆ ಎಂದು ಹೆಸರಿಟ್ಟನು. ಯೆಹೋವನ ಬೆಟ್ಟದಲ್ಲಿ ಒದಗುವದು ಎಂಬದಾಗಿ ಇಂದಿನವರೆಗೂ ಹೇಳುವದುಂಟಲ್ಲಾ.
Compare
Explore ಆದಿಕಾಂಡ 22:14
2
ಆದಿಕಾಂಡ 22:2
ಆಗಲಾತನು - ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ತೆಗೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ಅವನನ್ನು ನಾನು ಹೇಳುವ ಒಂದು ಬೆಟ್ಟದ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು ಅಂದನು.
Explore ಆದಿಕಾಂಡ 22:2
3
ಆದಿಕಾಂಡ 22:12
ಆ ದೂತನು ಅವನಿಗೆ - ನಿನ್ನ ಹುಡುಗನ ಮೇಲೆ ಕೈಹಾಕಬೇಡ, ಅವನಿಗೆ ಏನೂ ಮಾಡಬೇಡ. ನೀನು ನಿನ್ನ ಒಬ್ಬನೇ ಮಗನನ್ನಾದರೂ ನನಗೆ ಸಮರ್ಪಿಸುವದಕ್ಕೆ ಹಿಂದೆಗೆಯಲಿಲ್ಲವಾದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂಬದು ಈಗ ತೋರಬಂತು ಎಂದು ಹೇಳಿದನು.
Explore ಆದಿಕಾಂಡ 22:12
4
ಆದಿಕಾಂಡ 22:8
ಮಗನೇ, ಹೋಮಕ್ಕೆ ಬೇಕಾದ ಕುರಿಯನ್ನು ದೇವರೇ ಒದಗಿಸುವನು ಅಂದನು. ಹೀಗೆ ಅವರಿಬ್ಬರೂ ಹೋದರು.
Explore ಆದಿಕಾಂಡ 22:8
5
ಆದಿಕಾಂಡ 22:17-18
ನಿನ್ನ ಸಂತತಿಯನ್ನು ಹೆಚ್ಚಿಸೇ ಹೆಚ್ಚಿಸುವೆನು; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ ಅಸಂಖ್ಯವಾಗಿ ಮಾಡುವೆನು; ಅವರು ಶತ್ರುಗಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರು. ನೀನು ನನ್ನ ಮಾತನ್ನು ಕೇಳಿದ್ದರಿಂದ ಭೂವಿುಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು ಎಂಬದಾಗಿ ಯೆಹೋವನು ತನ್ನಾಣೆಯಿಟ್ಟು ಹೇಳಿದ್ದಾನೆ ಅಂದನು.
Explore ಆದಿಕಾಂಡ 22:17-18
6
ಆದಿಕಾಂಡ 22:1
ಈ ಸಂಗತಿಗಳು ಆದ ಮೇಲೆ ದೇವರು ಅಬ್ರಹಾಮನನ್ನು ಪರಿಶೋಧಿಸಿದನು. ಹೇಗಂದರೆ ಆತನು ಅವನನ್ನು - ಅಬ್ರಹಾಮನೇ ಎಂದು ಕರೆಯಲು ಅವನು - ಇಗೋ, ಇದ್ದೇನೆ ಅಂದನು.
Explore ಆದಿಕಾಂಡ 22:1
7
ಆದಿಕಾಂಡ 22:11
ಕೈಚಾಚಿ ಕತ್ತಿಯನ್ನು ಹಿಡಿದುಕೊಳ್ಳಲು ಯೆಹೋವನ ದೂತನು ಆಕಾಶದೊಳಗಿಂದ - ಅಬ್ರಹಾಮನೇ, ಅಬ್ರಹಾಮನೇ ಎಂದು ಅವನನ್ನು ಕರೆದನು. ಅದಕ್ಕೆ ಅಬ್ರಹಾಮನು - ಇಗೋ, ಇದ್ದೇನೆ ಅಂದನು.
Explore ಆದಿಕಾಂಡ 22:11
8
ಆದಿಕಾಂಡ 22:15-16
ಯೆಹೋವನ ದೂತನು ಆಕಾಶದೊಳಗಿಂದ ಎರಡನೆಯ ಸಾರಿ ಅಬ್ರಹಾಮನನ್ನು ಕರೆದು ಅವನಿಗೆ - ಯೆಹೋವನು ನುಡಿದದ್ದನ್ನು ಕೇಳು; ನೀನು ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವದಕ್ಕೆ ಹಿಂದೆಗೆಯದೆ ಹೋದದ್ದರಿಂದ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು
Explore ಆದಿಕಾಂಡ 22:15-16
9
ಆದಿಕಾಂಡ 22:9
ದೇವರು ಹೇಳಿದ ಸ್ಥಳಕ್ಕೆ ಅವರು ಸೇರಿದಾಗ ಅಬ್ರಹಾಮನು ಯಜ್ಞವೇದಿಯನ್ನು ಕಟ್ಟಿ ಕಟ್ಟಿಗೆಯನ್ನು ಒಟ್ಟಿ ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಬಿಗಿದು ಅವನನ್ನು ವೇದಿಯಲ್ಲಿ ಕಟ್ಟಿಗೆಯ ಮೇಲೆ ಇಟ್ಟನು.
Explore ಆದಿಕಾಂಡ 22:9
Home
Bible
Plans
Videos